23-08-2021 : ಇಂದಿನ ರಾಶಿಫಲ : ನಿಮ್ಮ ಗ್ರಹಬಲ ಹೇಗಿದೆ ನೋಡಿ -Vishwanews24
23-08-2021 : ಇಂದಿನ ರಾಶಿಫಲ : ನಿಮ್ಮ ಗ್ರಹಬಲ ಹೇಗಿದೆ ನೋಡಿ -Vishwanews24
ಮೇಷ: ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರಗಳಲ್ಲಿ ದುಃಖ, ಮೋಸ, ವಂಚನೆ ಚರ್ಚೆ ಇತ್ಯಾದಿಗಳು ಆಗದಂತೆ ಎಚ್ಚರಿಕೆಯ ನಡೆ ಅಗತ್ಯ.
ವೃಷಭ: ವೈಭವದಿಂದ ಕೂಡಿದ ದಿನ. ವಿದ್ಯೆ, ವಿನಯ ನಡೆಯಿಂದ ಸ್ಥಾನಮಾನ ವೃದ್ಧಿ. ನಿರೀಕ್ಷೆಗೂ ಮೀರಿದ ಧನ ಸಂಪತ್ತು ಲಭ್ಯ.
ಮಿಥುನ: ಆರೋಗ್ಯ ಗವನಿಸಿ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ನಿರೀಕ್ಷಿತ ಸುಖ ಅನುಭವವಾದೀತು.
ಕರ್ಕ: ಹಠ ಪ್ರವೃತ್ತಿಯಿಂದ ತೊಂದರೆ ಸಾಧ್ಯ. ಅನಗತ್ಯ ವಿಚಾರಗಳಿಗೆ ಕಿವಿಕೊಡದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆಸ್ತಿ ವಿಚಾರದಲ್ಲಿ ಮುನ್ನಡೆ ತೋರೀತು.
ಸಿಂಹ: ಆರೋಗ್ಯ ವೃದ್ಧಿ . ಉದ್ಯೋಗ ವ್ಯವಹಾರದಲ್ಲಿ ನಿಖರತೆ. ಚುರುಕುತನ ಲೆಕ್ಕಾಚಾರ ಸ್ವಭಾವದಿಂದ ನಿರೀಕ್ಷಿತ ಸ್ಥಾನ ಅಧಿಕಾರ ಲಭ್ಯ.
ಕನ್ಯಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ನಿರೀಕ್ಷೆಗೂ ಮೀರಿದ ಧನಾರ್ಜನೆ.
ತುಲಾ: ಅತಿಯಾದ ಆತ್ಮಾಭಿಮಾನ ಸಲ್ಲದು. ತಾಳ್ಮೆ ಸಹನೆಯಿಂದ ಹೆಚ್ಚಿನ ಪ್ರಗತಿ ಗೌರವ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾದ ಖರ್ಚು ತೋರೀತು.
ವೃಶ್ಚಿಕ: ಗುರುಹಿರಿಯರ ಸಹಕಾರದಿಂದ ಸುಖವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ.
ಧನು: ದೀರ್ಘ ಪ್ರಯಾಣ, ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಸಹೋದ್ಯೋಗಿಗಳ ಸಹಕಾರ ಪರಿಶ್ರಮದಿಂದ ಕಾರ್ಯ ಸಫಲತೆ.
ಮಕರ: ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಜನಮನ್ನಣೆ ಗೌರವಾದಿ ವೃದ್ಧಿ.
ಕುಂಭ: ಅಭಿವೃದ್ಧಿದಾಯಕ ಚಟುವಟಿಕೆಗಳು. ಆರೋಗ್ಯದಲ್ಲಿ ಸುಧಾರಣೆ. ಸಂದಭೋಚಿತವಾದ ಕಾರ್ಯವೈಖರಿ. ಉತ್ತಮ ಧನ ಲಾಭ.
ಮೀನ: ಅನಗತ್ಯ ಒತ್ತಡದಿಂದ ದೇಹಾಯಾಸ ಸಂಭವ. ಆರೋಗ್ಯ ವಿಚಾರದಲ್ಲಿ ಉದಾಸೀನತೆ ತೋರದಿರಿ. ದೂರದ ವ್ಯವಹಾರದಿಂದ ಧನಾರ್ಜನೆ ವೃದ್ಧಿ.
