2nd PUC Result: ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ – Vishwanews24
2nd PUC Result: ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೇ, ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ತಮಗೆ ಬರಬೇಕಾದ ಅಂಕ ಬಂದಿಲ್ಲ ಅಥವಾ ಸಂದೇಹಗಳಿದ್ದರೇ, ಅಥವಾ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಾಗಿ, ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮೌಲ್ಯಮಾಪನ ಮಂಡಳಿ ಹೇಳಿದೆ.
ದ್ವೀತಿಯ ಪಿಯುಸಿ ಪರೀಕ್ಷೆ 1ರ ವಿದ್ಯಾರ್ಥಿಗಳ ಫಲಿತಾಂಶ ಪ್ರತಿಯನ್ನು ಕೆಎಸ್ಇಬಿಯು ಈಗಾಗಲೆ ಆಯಾ ಕಾಲೇಜು ಮಂಡಳಿಗಳಿಗೆ ಕಳುಹಿಸಿದೆ. ಇನ್ನು ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವವರು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಮಂಡಳಿಯು, kseab.karnataka.gov.inಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
- ಅಧಿಕೃತ ವೆಬ್‌ಸೈಟ್ – kseab.karnataka.gov.in ಗೆ ಭೇಟಿ ನೀಡಿ
- ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
- ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
- ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಫಾರ್ಮ್ ಡೌನ್‌ಲೋಡ್ ಮಾಡಿ
ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪಿಡಿಎಫ್ ಅನ್ನು ಸ್ವೀಕರಿಸುತ್ತಾರೆ. ನಂತರ ಅವರು ಮರುಪರಿಶೀಲಿಸಲು ಬಯಸುವ ಉತ್ತರಗಳನ್ನು ಶಾರ್ಟ್‌ಲಿಸ್ಟ್ ಮಾಡಬಹುದು. ಮರುಮೌಲ್ಯಮಾಪನ ಅರ್ಜಿಯುನ್ನು ಕೂಡ ಮೇಲೆ ತಿಳಿಸಿದ ವಿಧಾನದ ಮೂಲಕ ಭರ್ತಿ ಮಾಡಿ. ಪ್ರತಿ ವಿಷಯದ ಸ್ಕ್ಯಾನ್ ಮಾಡಿದ ಪ್ರತಿಗೆ 530ರೂ. ನಿಗದಿಪಡಿಸಲಾಗಿದೆ. ಪ್ರತಿ ವಿಷಯದ ಮೌಲ್ಯಮಾಪನಕ್ಕೆ 1,670 ರೂ. ನಿಗದಿ ಮಾಡಲಾಗಿದೆ.
ಇಬ್ಬರು ಮಕ್ಕಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ತಾಯಿ – Vishwanews24
