ಕಾಪು ಶಾಸಕರ ನಿಧಿಯಿಂದ ಫಲಾನುಭವಿಗಳಿಗೆ ಸುಮಾರು ಐದು ಲಕ್ಷ ರೂಪಾಯಿಯ ಸವಲತ್ತು ವಿತರಣೆ.| vishwanews24
ಕಾಪು ಶಾಸಕರ ನಿಧಿಯಿಂದ ಫಲಾನುಭವಿಗಳಿಗೆ ಸುಮಾರು ಐದು ಲಕ್ಷ ರೂಪಾಯಿಯ ಸವಲತ್ತು ವಿತರಣೆ.
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ರ ಶಾಸಕರ ನಿಧಿಯಿಂದ ಮೂರು ಮಂದಿ ವಿಕಲಚೇತನರಿಗೆ ದ್ವಿಚಕ್ರ ವಾಹನ ಹಾಗೂ ಹದಿನೈದು ಮಂದಿಗೆ ಶ್ರವಣ ಸಾಧನ ಮತ್ತು ಫಲಾನುಭವಿಗಳಿಗೆ ಆಯುಷ್ ಕಿಟ್ ವಿತರಣೆ ಮತ್ತು ಮನೆ ದುರಸ್ತಿಗೆ 95 ಸಾವಿರದ ಚೆಕ್ ವಿತರಣಾ ಕಾರ್ಯಕ್ರಮ ಕಾಪು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ,ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ನಾಯಕ್, ಆಯುಷ್ ವೈದ್ಯಾಧಿಕಾರಿ ಡಾ.ಅಲಕನಂದ್, ಪುರಸಭೆ ಮುಖ್ಯಧಿಕಾರಿ ವೆಂಕಟೇಶ ನಾವುಡ ಉಪಸ್ಥಿತರಿದ್ದರು.

