35 ವರ್ಷದ ವಿಧವೆಯನ್ನು ಮದುವೆಯಾದ 80 ವರ್ಷದ ವೃದ್ಧ..

Featured, ಜಿಲ್ಲೆ

ಮಂಡ್ಯ : ಮೊದಲ ಪತ್ನಿ ಹಾಗೂ ಮಕ್ಕಳು ನಿರ್ಲಕ್ಷಿಸಿದರು ಎಂಬ ಕಾರಣಕ್ಕೆ 80 ವರ್ಷದ ವೃದ್ಧನೊಬ್ಬ 35 ವರ್ಷದ ವಿಧವೆಯನ್ನು ಮದುವೆಯಾಗಿರುವ ಘಟನೆ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಎನ್.ಎಂ.ಮಹಮ್ಮದ್ ಗೌಸ್, ಅಬ್ಜಾ ಎಂಬ ವಿಧವೆಯನ್ನು ಮದುವೆಯಾಗಿದ್ದಾರೆ. ಈ ವಿಷಯ ತಿಳಿದು ಮೊದಲ‌ ಪತ್ನಿ ಅಮೀನಾ ಹಾಗೂ ಮಕ್ಕಳು ಅಬ್ಜಾಳಿಗೆ ಚಪ್ಪಲಿಯಿಂದ ಹೊಡೆದು ಮನೆ ಖಾಲಿ‌ಮಾಡಿಕೊಂಡು ಹೋಗುವಂತೆ ಹೇಳಿ, ಪ್ರಾಣ ಬೆದರಿಕೆ ಒಡ್ಡಿದ್ದಾರೆ.

ಮೊದಲ ಪತ್ನಿ‌ ಹಾಗೂ ಮಕ್ಕಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಎರಡು ಹೆಣ್ಣು ಮಕ್ಕಳಿರುವ ನೂರ್ ಅಬ್ಜಾ ಎಂಬ ವಿಧವೆಯನ್ನು ಗೌಸ್​ ಮದುವೆಯಾಗಿದ್ದಾರೆ. ಅ.17ರಂದು ಮೈಸೂರಿನಲ್ಲಿ ಮದುವೆಯಾಗಿತ್ತು.

ಮೊದಲ‌‌ ಪತ್ನಿಯಿಂದ ನಿರ್ಲಕ್ಷ್ಯಕ್ಕೊಳಗಾದಾಗ ವೃದ್ಧ ಗೌಸ್​ಗೆ ಊಟ ತಿಂಡಿ ಕೊಟ್ಟು ಅಬ್ಜಾ ಹಾರೈಕೆ ಮಾಡುತ್ತಿದ್ದಳು. ಇವರಿಬ್ಬರ ಒಡನಾಟ ಕಂಡು ಅನೈತಿಕ ಸಂಬಂಧ ಎಂದು ಮೊದಲ ಪತ್ನಿ ಅಮೀನಾ ಗೌಸ್​ಗೆ ಮಾನಸಿಕ‌ ಕಿರುಕುಳ ನೀಡುತ್ತಿದ್ದಳು. ಇದರಿಂದ ವೃದ್ದ ಮಹಮ್ಮದ್ ಗೌಸ್ ವಿಧವೆಯನ್ನು ವರಿಸಿದ್ದಾರೆ.