ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ: ಗೋಪಾಲಕನಾಗಿ ಗೋ ಸೇವೆ ಮಾಡಿದ ಸಂಸದ ಪ್ರತಾಪ್ ಸಿಂಹ -Vishwanews24
ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ: ಗೋಪಾಲಕನಾಗಿ ಗೋ ಸೇವೆ ಮಾಡಿದ ಸಂಸದ ಪ್ರತಾಪ್ ಸಿಂಹ -Vishwanews24
ಯುವ ಮೋರ್ಚಾ ಮೈಸೂರು ವತಿಯಿಂದ ಶ್ರೀ ಅಟಲ್ ಬಿಹಾರಿ ವಾಜಪೇಯಿಜೀ ರವರ ಜನ್ಮದಿನೋತ್ಸವದ ಅಂಗವಾಗಿ ಮೈಸೂರಿನ ಪಿಂಜರಾಪೋಲ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವುಗಳನ್ನು ಸ್ವಚ್ಛಗೊಳಿಸಲಾಯಿತು ಹಾಗೂ ಗೋವು ಪೊಜೆ ನೆರವೇರಿಸಲಾಯಿತು. pic.twitter.com/eWYp78hUTl
— Pratap Simha (@mepratap) December 25, 2020
ಮೈಸೂರು: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ, ಸಂಸದ ಪ್ರತಾಪ್‌ಸಿಂಹ ಗೋಶಾಲೆಯಲ್ಲಿ ಶ್ರಮದಾನ ಮಾಡಿದರು. ಗೋಪಾಲಕನಾಗಿ ಗೋಶಾಲೆಯಲ್ಲಿ ಸಗಣಿ ಬಾಚಿ ಸೇವೆ ಮಾಡಿದರು. ಗೋ ಪೂಜೆಗಾಗಿ ತಾನೇ ಹಸುವಿನ ಮೈತೊಳೆದು, ಮೇವು ತಿನ್ನಿಸಿ ಹಾರೈಕೆ ಮಾಡಿದರು.
ಮೈಸೂರಿನ ಪಿಂಜರಾಪೋಲ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಪ್ರತಾಪ್ ಸಿಂಹ, ಗೋವುಗಳನ್ನು ಸ್ವಚ್ಛಗೊಳಿಸಿ ನಂತರ ಗೋ ಪೊಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೊಡಗಿನವರು ಗೋ ಮಾಂಸ ಸೇವಿಸುತ್ತಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನೀವು ಗೋಮಾಂಸ ತಿನ್ನುತ್ತೀರಿ ಎಂದು ಇಡೀ ಕುರುಬ ಸಮಾಜದವರು ಬೀಫ್ ತಿನ್ನುತ್ತಾರೆ ಎನ್ನಲು ಆಗುತ್ತಾ ? ., ಸಿದ್ದರಾಮಯ್ಯ ಅವರು ವಿವೇಚನೆ ಇಲ್ಲದೆ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎನ್ನುವದೇ ನನಗೆ ಅರ್ಥವಾಗುತ್ತಿಲ್ಲ.
ಆತ್ಮದ್ರೋಹದ ಮಾತುಗಳನ್ನು ಕಾಂಗ್ರೆಸ್‌ನವರು ಮಾತ್ರ ಮಾತನಾಡೋಕೆ ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಗೋವನ್ನು ಎರಡನೇ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುವ, ಕೊಡವರಿಗೆ ನೋವಾಗುವಂತಹ ಮಾತುಗಳನ್ನಾಡಬೇಡಿ ಎಂದು ತಿಳಿಸಿದರು.
