4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ : ಮಲಯಾಳಂ ಚಿತ್ರ ನಟನ ವಿರುದ್ಧ ದೂರು ದಾಖಲು – vishwanews24
4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ : ಮಲಯಾಳಂ ಚಿತ್ರ ನಟನ ವಿರುದ್ಧ ದೂರು ದಾಖಲು
ಕೋಝಿಕ್ಕೋಡ್: ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮಲಯಾಳಂ ಚಿತ್ರ ತಂಡದ ಖ್ಯಾತ ನಟನೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಾಲ್ಕು ವರ್ಷದ ಬಾಲಕಿಯ ಪೋಷಕರು ನೀಡಿದ ದೂರಿನ ಆರೋಪದ ಮೇರೆಗೆ ಕಸಬಾ ಪೊಲೀಸರು ಮಲಯಾಳಂ ಚಿತ್ರ ನಟ ಕುಟಿಕಲ್ ಜಯಚಂದ್ರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಸಬಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು ಚೂರಿ ಪ್ರಕರಣ : ಸರಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ: ಸಚಿವ ದಿನೇಶ್ ಗುಂಡೂರಾವ್ – vishwanews24
ಕೌಟುಂಬಿಕ ಕಲಹದ ಲಾಭವನ್ನು ಬಳಸಿಕೊಂಡು ನಟ ತನ್ನ ನಾಲ್ಕು ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ತಾಯಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ದೂರಿನನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮನವಿ ಮೇರೆಗೆ ಕಸಬಾ ಠಾಣೆ ಪೊಲೀಸರು ದೂರುದಾರರ ಮನೆಗೆ ತೆರಳಿ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಜಯಚಂದ್ರ ಇನ್ನೂ ಅಧಿಕೃತ ಹೇಳಿಕೆ ನೀಡಬೇಕಿದೆ. ಪೊಲೀಸರು ವಿಚಾರಣೆ ಆರಂಭಿಸಿದ್ದು, ನಟನನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದು. ಇತ್ತ ಬಾಲಕಿಯ ಪೋಷಕರು ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಮಲಾವಿ ದೇಶದ ಉಪಾಧ್ಯಕ್ಷ ಚಿಲಿಮಾ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆ – vishwanews24
