Featured

50 ವರ್ಷಗಳವರೆಗೆ ಕಾದು ಕುಳಿತು, ಮತ್ತೆ ಶಬರಿಮಲೆಗೆ ಹೋಗಲು ಅವಕಾಶ ಕೇಳುವುದು ನಮ್ಮೆಲ್ಲರ ಹಕ್ಕು: ಕವಿತಾ ಸನಿಲ್ ,ಧರ್ಮ ಉಳಿಸಿ – ಶಬರಿಮಲೆ ಉಳಿಸಿ ಅಭಿಯಾನಕ್ಕೆ ಚಾಲನೆ

50 ವರ್ಷಗಳವರೆಗೆ ಕಾದು ಕುಳಿತು, ಮತ್ತೆ ಶಬರಿಮಲೆಗೆ ಹೋಗಲು ಅವಕಾಶ ಕೇಳುವುದು ನಮ್ಮೆಲ್ಲರ ಹಕ್ಕು: ಕವಿತಾ ಸನಿಲ್
                                                ಧರ್ಮ ಉಳಿಸಿ – ಶಬರಿಮಲೆ ಉಳಿಸಿ ಅಭಿಯಾನಕ್ಕೆ ಚಾಲನೆ
ಕಾಪು,  : ಬದುಕಿರುವಾಗ ಒಮ್ಮೆಯಾದರೂ ಶಬರಿಮಲೆಗೆ ಹೋಗಬೇಕೆನ್ನುವ ಆಸೆ ಪ್ರತೀಯೋರ್ವ ಮಹಿಳೆಯರಲ್ಲೂ ಇದ್ದೇ ಇದೆ. ಆದರೆ ಅದರ ಹೆಸರಿನಲ್ಲಿ ಸಂಪ್ರದಾಯ ಮುರಿದು ಹೋಗುವುದು ಸರಿಯಲ್ಲ. ಯಾವಾಗ ನಮಗೆ 48 ದಿನಗಳ ಕಾಲ ನಿರಂತರ ಉಪವಾಸ ವೃತಾಚರಣೆ ಮಾಡಿ ಶಬರಿಮಲೆಗೆ ಹೋಗಲು ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ನಾವು ಕಾಯಬೇಕಿದೆ. 50 ವರ್ಷಗಳವರೆಗೆ ಕಾದು ಕುಳಿತು, ಮತ್ತೆ ಶಬರಿಮಲೆಗೆ ಹೋಗಲು ಅವಕಾಶ ಕೇಳುವುದು ನಮ್ಮೆಲ್ಲರ ಹಕ್ಕು ಎಂದು ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಹೇಳಿದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಿತಿ ಕಾಪು ತಾಲೂಕು ಇವರ ನೇತೃತ್ವದಲ್ಲಿ ಭಾನುವಾರ ಕಾಪುವಿನಲ್ಲಿ ಜರಗಿದ ಬೃಹತ್ ಅಯ್ಯಪ್ಪ ನಾಮ ಜಪಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡು, ಬಳಿಕ ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ನಿಟ್ಟಿನಲ್ಲಿ ನೀಡಿರುವ ತೀರ್ಪಿಗೆ ನಾವು ತಲೆಬಾಗಲೇ ಬೇಕು. ಆದರೆ ಆ ತೀರ್ಪು ಮರುಪರಿಶೀಲನೆಯಾಗಲಿ ಎನ್ನುವುದು ನಮ್ಮೆಲ್ಲರ ಒಕ್ಕೊರಲಿನ ಬೇಡಿಕೆ. ಸಮಸ್ತ ಹಿಂದೂ ಸಮುದಾಯ ಒಂದಾಗಿ ಬೇಡಿಕೆಯನ್ನು ಸರಕಾರ ಮತ್ತು ಸರ್ವೋಚ್ಛ ನ್ಯಾಯಾಲಯದ ಮುಂದಿಡುವ ಅಗತ್ಯತೆಯಿದೆ ಎಂದರು.
ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೇಶದ ಅತಿ ಪುರಾತನ ದೇವಳಗಳ ಆಚಾರ ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇವೆ ಆದರೆ ಕೇರಳದ ಪಿಣರಾಯಿ ಸರ್ಕಾರ ಹಿಂದುತ್ವದ ವಧೆಗೆ ತಯಾರಾದ ಹಾಗಿದೆ. ಹಿಂದುಗಳ ಭಾವನೆಗೆ ಕಿಂಚಿತ್ತೂ ಬೆಲೆ ಕೊಡುತ್ತಿಲ್ಲ. ಇದನ್ನು ವಿರೋಧಿಸಿ ಮತ್ತು ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯುತ್ತದೆ.
ಇಡೀ ದೇಶದಾದ್ಯಂತ ಹಿಂದೆಂದೂ ಕಾಣದಂತ ಆಂದೋಲನ ನಡೆಯುತ್ತಿದೆ. ಇದರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಭಾಗಿಯಾಗುತಿದ್ದಾರೆ. ಮಹಿಳೆಯರು ತಮ್ಮ ಜವಾಬ್ದಾರಿ ಅರಿತು ದೇಗುಲ ಪ್ರವೇಶ ಮಾಡುತ್ತಿದ್ದಾರೆ. ಆದರೆ ಕೇರಳ ಸರ್ಕಾರ ಇದಕ್ಕೆ ಸಂಬಂಧವಿಲ್ಲದವರನ್ನು ದೇಗುಲ ಪ್ರವೇಶ ಮಾಡಲು ಹುನ್ನಾರ ನಡೆಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿಯಾಗಿದೆ. ಅನವಶ್ಯಕವಾಗಿ ಹಿಂದುಗಳನ್ನು ಜೈಲಿಗೆ ತಳ್ಳುತಿದ್ದಾರೆ. ಉಚ್ಛನ್ಯಾಯಾಲಯ ಇದನ್ನರಿತು ಪುನರಪಿ ತೀರ್ಪನ್ನು ಪರಿಶೀಲಿಸಿ ಶಬರಿಮಲೆ ಅಯ್ಯಪ್ಪ ದೇಗುಲದ ಆಚರಣೆಗೆ ಪರವಾಗಿ ತೀರ್ಪನ್ನು ಕೊಡಬೇಕು ಎಂದೂ ಸುರೇಶ್ ಶೆಟ್ಟಿ ಆಗ್ರಹಿಸಿದರು .
ದಿಕ್ಸೂಚಿ ಭಾಷಣ ಮಾಡಿದ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಹಿಂದೂ ಧರ್ಮ ಮತ್ತು ಹಿಂದೂ ಸಂಪ್ರದಾಯಗಳ ಅಸ್ತಿತ್ವಕ್ಕೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ನಾವು ಸಂಘಟಿತರಾಗಿ ಹೋರಾಡುವ ಅಗತ್ಯತೆಯಿದೆ. ಶಬರಿಮಲೆಯಂತಹ ಪವಿತ್ರ ಧಾರ್ಮಿಕ ಕ್ಷೇತ್ರ ಮತ್ತು ಆ ಕ್ಷೇತ್ರದ ಸಂಪ್ರದಾಯದ ಅಳಿವು – ಉಳಿವಿನ ಬಗ್ಗೆ ನಾವೇ ಯೋಚಿಸಬೇಕಿದೆ. ಶಬರಿಮಲೆಯ ವಿಚಾರ ಬಂದಾಗ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಾಗಿ ಏಕಮನಸ್ಸಿನಿಂದ ಹೋರಾಟದ ಕಿಚ್ಚನ್ನು ಹಚ್ಚಿಕೊಂಡಿದ್ದು, ಇದು ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ ಎಂದರು.
ಬಾಲಾಜಿ ಗುರುಸ್ವಾಮಿ ಕಾರ್ಕಳ, ಸುರೇಶ್ ಗುರುಸ್ವಾಮಿ ಕಟಪಾಡಿ, ಏಕನಾಥ ಗುರುಸ್ವಾಮಿ ಹೆಜಮಾಡಿ, ಅನಿಲ್ ಗುರುಸ್ವಾಮಿ, ಗೋಪಾಲ ಸ್ವಾಮಿ ಬೆಳಪು ಮೊದಲಾದವರು ಅಯ್ಯಪ್ಪ ಜಪಯಾತ್ರೆಯ ನೇತೃತ್ವ ವಹಿಸಿದ್ದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್, ಪೊಲ್ಯ ಹರೀಶ್ ಶೆಟ್ಟಿ, ಲೀಲಾಧರ ಶೆಟ್ಟಿ ಕಾಪು, ಗಂಗಾಧರ ಸುವರ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ರೇಶ್ಮಾ ಶೆಟ್ಟಿ, ಉದಯ ಶೆಟ್ಟಿ ಇನ್ನಾ, ಕಾಪು ದಿವಾಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ, ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕುತ್ಯಾರು ಪ್ರಸಾದ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಕೇಸರಿ ಯುವರಾಜ್, ಕಾಪು ತಾಲೂಕು ಸಮಿತಿಯ ಗೌರವಾಧ್ಯಕ್ಷ ಸುಧಾಕರ ಪಾಣಾರ, ಸಂಚಾಲಕ ರಘುರಾಮ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಿತಿ ಜಿಲಾಧ್ಯಕ್ಷ ಗಿರೀಶ್ ಎಸ್. ಪ್ರಸ್ತಾವನೆಗೈದರು. ಕಾಪು ತಾಲೂಕು ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಪೆÇಲ್ಯ ಸ್ವಾಗತಿಸಿದರು. ಅಧ್ಯಕ್ಷ ಗೋಪಾಲ ಪೂಜಾರಿ ವಂದಿಸಿದರು. ಕಾರ್ಯದರ್ಶಿ ದಿವಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Vishwa News 24

Recent Posts

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

8 minutes ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

15 minutes ago

ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು – vishwanews24

ಪುತ್ತೂರು: ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಪುತ್ತೂರು: ಕಲ್ಲೇಗ ಟೈಗರ್ಸ್…

31 minutes ago

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ – vishwanews24

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ ನವದೆಹಲಿ: ಎಲ್​ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ…

40 minutes ago

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು – vishwanews24

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…

52 minutes ago

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ – vishwanews24

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…

2 hours ago