ನವದೆಹಲಿ : ಸೂಪರ್ ಸ್ಟಾರ್ ರಜನಿಕಾಂತ್ 51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಜಾವ್ಡೇಕರ್, 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಆಯ್ಕೆಗೊಂಡಿದ್ದಾರೆ. ಭಾರತದ ಸಿನೆಮಾ ರಂಗದಲ್ಲಿ ರಜನಿಕಾಂತ್ ಮೇರು ನಟ. ನಟರಾಗಿ, ನಿರ್ಮಾಪಕರಾಗಿ, ಚಿತ್ರ ಕಥೆಗಾರನಾಗಿ ಭಾರತೀಯ ಸಿನೆಮಾ ರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತ ಪಡಿಸಿದ ನಟ ಹಾಗೂ ನಿರ್ದೇಶಕ ಕಮಲಾ ಹಾಸನ್, ಸೂಪರ್ ಸ್ಟಾರ್ ಹಾಗೂ ನನ್ನ ಆತ್ಮೀಯ ಗೆಳೆಯ ರಜನಿಕಾಂತ್ ಈ ಪ್ರಶಸ್ತಿಗೆ ಶೇಕಡಾ ನೂರಕ್ಕೆ ನೂರು ಅರ್ಹ ವ್ಯಕ್ತಿ. ಅವರು ಪರದೆ ಮೇಲೆ ಪ್ರೇಕ್ಷಕರನ್ನು ಇಷ್ಟು ಪ್ರಮಾಣದಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯ ಸಿನೆಮಾ ರಂಗದ ಪಿತಾಮಹ ಎಂದು ಕರೆಯಲ್ಪಡುವ ದಾದಾ ಸಾಹೇಬ್, 1913ರಲ್ಲಿ ನಟರಾಗಿ ಭಾರತೀಯ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿ ಭಾರತೀಯ ಸಿನೆಮಾ ರಂಗದ ಶ್ರೇಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಸಿನೆಮಾರಂಗದ ಶ್ರೇಷ್ಠ ಮಾನ್ಯರಿಗೆ, ಭಾರತೀಯ ಸಿನಿ ರಂಗಕ್ಕೆ ನೀಡಿದ ಅಪಾರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ಸ್ವರ್ಣ ಕಮಲ ಪದಕ ಹಾಗೂ ಹತ್ತು ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
402 ಸಿವಿಲ್ ಪಿ.ಎಸ್.ಐ ನೇಮಕಕ್ಕೆ ಅಧಿಸೂಚನೆ ಪ್ರಕಟ-Vishwanews24
ಈ ಪ್ರಶಸ್ತಿಯನ್ನು ಕಳೆದ ವರ್ಷ ಘೋಷಿಸಬೇಕಾಗಿತ್ತು. ಕೋವಿಡ್ ಸಾಂಕ್ರಾಮಿಕ ಸೋಂಕು ಹಾಗೂ ಲಾಕ್ಡೌನ್ ನ ಕಾರಣದಿಂದಾಗಿ ವಿಳಂಬವಾಗಿತ್ತು. ಗಾಯಕರಾದ ಆಶಾ ಭೋಸ್ಲೆ ಮತ್ತು ಶಂಕರ್ ಮಹಾದೇವನ್, ನಟರಾದ ಮೋಹನ್ ಲಾಲ್ ಮತ್ತು ಬಿಸ್ವಾಜೀತ್, ಮತ್ತು ಚಲನಚಿತ್ರ ನಿರ್ಮಾಪಕ ಸುಭಾಷ್ ಘೈ ಇದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 2019 ನೇ ಸಾಲಿನ ಆಯ್ಕೆ ಸಮಿತಿಯು ರಜನಿಕಾಂತ್ ಅವರನ್ನು ಸಿನೆಮಾ ರಂಗಕ್ಕೆ ನೀಡಿದ ಅಪಾರವಾದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…
Council Election Fight: 222 ಶಾಸಕರಿಂದ ಮತದಾನ; ಸಂಜೆ 5 ಗಂಟೆಗೆ ಫಲಿತಾಂಶ Council Election Fight: ಸಾಕಷ್ಟು ಕುತೂಹಲ…
ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು ಬೆಂಗಳೂರು : ರಾಜಧಾನಿಯ ಉತ್ತರ ತಾಲೂಕಿನ…
ಮಂಗಳೂರು : ಎಲ್ಲಾ ಏಜೆನ್ಸಿಗಳು MEA ಅಡಿ ನೋಂದಾವಣೆ ಕಡ್ಡಾಯ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು :…
ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು.. ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ಬಂದ್ ಬೆಂಗಳೂರು: ರೈಲ್ವೆ…