55 ವರ್ಷದಿಂದ ಕೃಷಿ ಬದುಕು ಜತೆಗೆ ಉದ್ಯಮ ಹಾಗೂ ಸಾಮಾಜಿಕ ಜೀವನ ನಡೆಸುವ ಕಾಪು ಶೇಖರ ಸಾಲಿಯಾನ್.
55 ವರ್ಷದಿಂದ ಕೃಷಿ ಬದುಕು ಜತೆಗೆ ಉದ್ಯಮ ಹಾಗೂ ಸಾಮಾಜಿಕ ಜೀವನ ನಡೆಸುವ ಕಾಪು ಶೇಖರ ಸಾಲಿಯಾನ್.
ಕಾಪು :ಕೃಷಿಕ ದೇಶದ ಬೆನ್ನೆಲುಬು ಅಂತಾ ಕರಿತಾರೆ ಆದ್ರೇ ಕೃಷಿ ಕಡೆ ತಲೆ ಹಾಕಿ ಮಲಗುವುದೇ ಕಡಿಮೆ ಆಗಿದೆ .ಅಂತಹ ಈ ಸಮಯದಲ್ಲೂ ಕೃಷಿಯನ್ನೆ ಅವಲಂಭಿಸಿಕೊಂಡು ಅದರ ಜತೆಗೆ ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲೂ ಕೂಡ ಸೈ ಅನಿಸಿಕೊಂಡಿರುವ ವ್ಯಕ್ತಿಯ ಈ ಸ್ಟೋರಿ.
ಹೌದು ಕಾಪು ಪುರಸಭಾ ವ್ಯಾಪ್ತಿಯ ಕಾಪು ದ್ವೀಪ ಸ್ಥಂಬದ ಬಳಿಯಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಶೇಖರ್ ಸಾಲ್ಯಾನ್, ಸುಮಾರು 72 ವರ್ಷ ಪ್ರಾಯದ ಕೃಷಿನ ಕಾರ್ಯದಲ್ಲಿ ಯುವಕರಿಗೆ ಸೆಡ್ಡು ಹೊಡೆಯಬಲ್ಲ ವ್ಯಕ್ತಿ,ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಈ ವ್ಯಕ್ತಿ ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿ ಕಾಪು ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಅದರ ಜತೆಗೆ ಸುಮಾರು 50 ವರ್ಷದಿಂದ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಭೂಮಿಯಲ್ಲಿ 365 ದಿನಾಲೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕರಾವಳಿ ಭಾಗದ ಏಕೈಕ ವ್ಯಕ್ತಿ ಕಾಪು ಶೇಖರ ಸಾಲ್ಯಾನ್.

ಬೆಳಗ್ಗಿನ ಜಾವ 5.30 ರಿಂದ ಮಧ್ಯಾಹ್ನದವರೆಗೆ ಸಂಪೂರ್ಣ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ತದನಂತರದ ಸಮಯ ತನ್ನ ಹೋಟೆಲ್ ಉದ್ಯಮ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೈ ಅನಿಸಿಕೊಂಡಿದ್ದಾರೆ.
ಪ್ರತಿ ವರ್ಷ ಭತ್ತದ ಪೈರು, ಜತೆಜತೆಗೆ ಕಲ್ಲಂಗಡಿ, 20ಕ್ಕೂ ಅಧಿಕ ಬಗೆಯ ಸಾವಯವ ತರಕಾರಿ ಸೌತೆಹಣ್ಣು,ಕುಂಬಳಕಾಯಿ, ಮೂಲಂಗಿ, ಕ್ಯಾರೆಟ್,ಬೀನ್ಸ್,ಅಲಸಂಡೆ, ಬಸಲೆ, ಟೋಮೆಟೊ, ಮೆಣಸು, ಮಾವು,ಸೇರಿದಂತೆ ಇನ್ನೂ ಹಲವು ಬಗೆಯ ಕೃಷಿಯನ್ನ ಬೆಳೆಸುತ್ತಾರೆ.
ಈ ಭಾರಿ ಸುಮಾರು 1 ಎಕರೆ ಜಾಗದಲ್ಲಿ ಕಲ್ಲಂಗಡಿ ಕೃಷಿ ಮಾಡಿದ್ದು ಒಂದೊಂದು ಕಲ್ಲಂಗಡಿ ಸುಮಾರು 10 ಕೇಜಿಗೂ ಅಧಿಕ ತೂಕದ ಇಳುವರಿ ಕಂಡಿದೆ.
ಆದರೇ ಈ ಎಲ್ಲಾ ಕೃಷಿ ಮಾಡಿದರೂ ಸಹ ಮಾರ್ಕೇಟ್ ಮಾತ್ರ ನರಸತ್ತಂತಾಗಿದೆ ಬೆಳೆಸಿದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕೆಲವೊಂದು ಸಲ ಮೂರು-ಮುಕ್ಕಾಲು ದರಕ್ಕೂ ನೀಡಿದ್ದು ಇದೆ ಅನ್ನತ್ತಾರೆ.
ಕೃಷಿ ಅಧ್ಯಯಾನದ ವಿಚಾರವಾಗಿ ವಿದೇಶವಾದ ಚೈನಾ ಹಾಗೂ ದೇಶದ ಮೂಲೆ ಮೂಲೆಗೂ ಸಂಚರಿಸಿ ಅಲ್ಲಿನ ಆಧುನಿಕ ಪ್ರಯೋಗವನ್ನ ಕರಾವಳಿ ಭಾಗಕ್ಕೆ ಹೊಂದಣಿಸಿ ಬೆಳೆ ಬೆಳೆಸಿದ್ದು ಇದೆ ಇವರು.
ಸುಮಾರು 55 ವರ್ಷದಿಂದ ಕೃಷಿ ಕಾರ್ಯ ಮಾಡುತ್ತಿದ್ದೇನೆ ,ಮಾದಲಿಗೆ ನಾನು ಕೃಷಿಕ ತದನಂತರ ಸಾಮಾಜಿಕ ಧಾರ್ಮಿಕ ಜತೆಗೆ ಉದ್ಯಮ,ಕೆಲವೊಂದು ಸಲ ಲಾಭ ನಷ್ಟ ಆಗಿದ್ದು ಇದೆ, ಹಾಗಂತ ಕಾಯಕ ನಿಲ್ಲಿಸಲಿಲ್ಲ ಮನೆಯ 365 ದಿನಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಸಿ ಉಳಿದದನ್ನು ಸ್ಥಳಿಯ ಸಂತೆಗೆ ನೀಡುತ್ತೇವೆ ಮಾತ್ರವಲ್ಲದೆ ಲೈಟ್‍ಹೌಸ್ ನೋಡಲು ಬರುವ ಪ್ರವಾಸಿಗರೂ ಕೂಡ ಬಂದ ಸಾವಯಾವ ಎಂಬ ಕಾರಣದಿಂದ ಕೊಂಡುಕೊಳ್ಳುತ್ತಾರೆ, ಆದ್ರೇ ಮಾರ್ಕೇಟ್ ನಂಬಿಕೊಂಡು ಈಗಿನ ಕಾಲದಲ್ಲಿ ಕೃಷಿ ಮಾಡುವುದು ಭಾರಿ ಕಷ್ಟ.
(ಕಾಪು ಶೇಖರ ಸಾಲಿಯಾನ್.)
ವರದಿ: ಪುರುಷೋತ್ತಮ ಸಾಲ್ಯಾನ್ ಮೂಳೂರು
9343846360

