ನವದೆಹಲಿ: ಸುಮಾರು ಆರು ವರ್ಷಗಳ ಬಳಿಕ ಚೀನಾದ ಗುವಾಂಗ್‌ಝೌ ಮತ್ತು ನವದೆಹಲಿ ನಡುವಿನ ನೇರ ವಿಮಾನ ಸಂಪರ್ಕ ಸೇವೆ ಪುನರಾರಂಭಗೊಳ್ಳುತ್ತಿದ್ದು, ಸೆಪ್ಟೆಂಬರ್ 21ರಿಂದ ಪ್ರತಿದಿನ ವಿಮಾನ ಸಂಚಾರ ಆರಂಭವಾಗಲಿದೆ.
ಭಾರತದ ಆತಿಥ್ಯದಲ್ಲಿ ದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಗೆ ಅದ್ಧೂರಿ ಚಾಲನೆ ದೊರೆತಿದೆ. ಹಲವು ಜಾಗತಿಕ ನಾಯಕರ ಜೊತೆಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಜೊತೆಗೂ ಮಾತುಕತೆ ನಡೆಸಲಿದ್ದಾರೆ. ಈ ನಡುವೆ ಚೀನಾದ ಪ್ರಮುಖ ವಿಮಾನಯಾನ ಸಂಸ್ಥೆ ಚೀನಾ ಸದರ್ನ್ ಏರ್‌ಲೈನ್ಸ್ ಗುವಾಂಗ್‌ಝೌ-ನವದೆಹಲಿ ನೇರ ವಿಮಾನ ಸೇವೆ ಪುನರಾರಂಭಿಸುತ್ತಿರುವುದಾಗಿ ವರದಿಯಾಗಿದೆ.
ಚೀನಾ ಸದರ್ನ್ ಏರ್‌ಲೈನ್ಸ್ ಗುವಾಂಗ್‌ಝೌ ಬೈಯುನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಒಂದು ನೇರ ವಿಮಾನವನ್ನು ನಿರ್ವಹಿಸಲಿದೆ. ಬೋಯಿಂಗ್ 737 ಸರಣಿಯ ವಿಮಾನಗಳನ್ನು ಈ ಮಾರ್ಗದಲ್ಲಿ ಬಳಸಲಾಗುತ್ತದೆ.
ಚೀನಾ ಹಾಗೂ ಭಾರತ ದ್ವಿಪಕ್ಷೀಯ ಸಭೆಯಲ್ಲಿ ಗಡಿ, ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ವೀಸಾ ಸೇವೆಗಳ, ಮಿಲಿಟರಿ ಮತ್ತು ರಾಜತಾಂತ್ರಿಕ ಸಂವಾದ ಬಲಪಡಿಸುವ, ಭಾರತೀಯ ಕಂಪನಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರವೇಶ, ಭಾರತದ ವ್ಯಾಪಾರ ಕೊರತೆ ಕಡಿಮೆ ಮಾಡುವ, ಚೀನಾಕ್ಕೆ ಭಾರತದ ರಫ್ತು ಹೆಚ್ಚಳ, ಯಂತ್ರೋಪಕರಣಗಳು, ತಂತ್ರಜ್ಞಾನ ಪೂರೈಕೆ ಸುಗಮಗೊಳಿಸುವ, ಚೀನಾದ ಹೂಡಿಕೆಗೆ ವಿಶ್ವಾಸಾರ್ಹ ನಿಯಮಗಳನ್ನ ಸ್ಥಾಪಿಸುವುದರ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಕೊಕ್ಕಡ : ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ಅಪಘಾತ ; ಹಲವರಿಗೆ ಗಾಯ ಬೆಳ್ತಂಗಡಿ: ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್…
ಪಂಚ ಗ್ಯಾರಂಟಿ ಯೋಜನೆ ತರಲು ನಾನೇ ಮೂಲ ಕಾರಣ : ಸಿಎಂ ಡಿಕೆ ಶಿ ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳನ್ನು…
ಹಾಸನ : ಫ್ಲೈ ಓವರ್ ಮೇಲೆ ಪೆಟ್ರೋಲ್ ಟ್ಯಾಂಕರ್ ಪಲ್ಟಿ ; ವಾಹನ ಸಂಚಾರ ಸ್ಥಗಿತ ಹಾಸನ: ನಗರದ ಹೊರವಲಯದಲ್ಲಿರುವ ಕೆಂಚಟ್ಟಹಳ್ಳಿ…
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬೆಳ್ತಂಗಡಿಯ ಉಷಾರಾಣಿ ನೇಮಕ ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಷಾರಾಣಿ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.…
‘ಉದ್ಯೋಗ ನಿಧಿ’ ಯೋಜನೆಯಡಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ : ಪ್ರಿಯಾಂಕ್ ಖರ್ಗೆ ಬೆಂಗಳೂರು : ರಾಜ್ಯದ…
ಪರವಾನಗಿ ಇಲ್ಲದ ಅಕ್ರಮ ಬಂದೂಕು ನ.1ರೊಳಗೆ ಒಪ್ಪಿಸಲು ಸೂಚನೆ; ತಪ್ಪಿದರೆ ಕಠಿಣ ಕ್ರಮ : ಸಿಎಂ ಎಚ್ಚರಿಕೆ ಬೆಂಗಳೂರು :…