60 ವರ್ಷ ರಾಜ್ಯ ಆಳಿದವರು ದಲಿತರನ್ನೇಕೆ ಸಿಎಂ ಮಾಡಲಿಲ್ಲ?: ಕುಮಾಸ್ವಾಮಿ -Vishwanews24
60 ವರ್ಷ ರಾಜ್ಯ ಆಳಿದವರು ದಲಿತರನ್ನೇಕೆ ಸಿಎಂ ಮಾಡಲಿಲ್ಲ?: ಕುಮಾಸ್ವಾಮಿ -Vishwanews24
ಮಂಡ್ಯ: ‘ಸ್ವಾತಂತ್ರ್ಯದ ನಂತರ 60 ವರ್ಷ ರಾಜ್ಯ ಆಳಿದ ಕಾಂಗ್ರೆಸ್ ನಾಯಕರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ವಿಚಾರ ಗೊತ್ತಿರಲಿಲ್ಲವೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಮದಿಗೆ ಮಾತನಾಡಿದ ಅವರು ‘ದಲಿತರು ಮುಖ್ಯಮಂತ್ರಿಯಾಗುವುದನ್ನು ನಾವು ತಪ್ಪಿಸಿಲ್ಲ. ಅವಕಾಶ ತಪ್ಪಿಸಿದ್ದವರೇ ಈಗ ಮತ್ತೆ ಸಿ.ಎಂ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ. ತಾನಿದ್ದರಷ್ಟೇ ಕಾಂಗ್ರೆಸ್ ಎಂದೂ ಹೇಳಿಕೊಳ್ಳುತ್ತಾರೆ. 130 ಸೀಟ್ ಗೆದ್ದವರು 78ಕ್ಕೆ ತಂದು ನಿಲ್ಲಿಸಿದ್ದಾರಲ್ಲ ಅವರೇ ದಲಿತರಿಗೆ ಸಿ.ಎಂ ಆಗುವ ಅವಕಾಶ ತಪ್ಪಿಸಿದ್ದಾರೆ’ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
