ಕಾಪು: ಕಾಪು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ ಅವರ ಬೀಳ್ಕೊಡುಗೆ ಸಮಾರಂಭ ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ಕಳೆದ ಒಂದುವರೆ ವರ್ಷದಿಂದ ಕಾಪು ಠಾಣೆಯಲ್ಲಿ ಸೇವೆಯನ್ನು ಸಲ್ಲಿಸಿದ ಇವರಿಗೆ ಹದಿನೈದು ದಿನಗಳ ಹಿಂದೆ
ಶಿರ್ವ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಬಿಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು” ಪೊಲೀಸ್ ಇಲಾಖೆ ಎಂದಿಗೂ ತಪ್ಪು ಮಾಡಬಾರದು ಸಮಾಜವನ್ನು ತಿದ್ದುವ ಖಾಕಿ ಸಮಾಜದಲ್ಲಿ ಸಮಾಜ ಮುಖಿಯಾಗಿರಬೇಕು,ಕಾಪು ಅನ್ನುವಂತಹ ಊರಿನಲ್ಲಿ ಸೇವೆ ಮಾಡುವುದು ಒಂದು ಭಾಗ್ಯ ಸಾರ್ವಜನಿಕ ಸಹಕಾರದಿಂದ ಎಲ್ಲಾವೂ ತೃಪ್ತಿಕರ ಸೇವೆ ಆಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮಾತನಾಡಿ” ಸಬ್ ಇನ್ಸ್ಪೆಕ್ಟರ್ ಹುದ್ದೆ ಸುಲಭವಾದ ಜವಬ್ದಾರಿ ಅಲ್ಲ ಅದೊಂದು ಮೈಲಿಗಲ್ಲು ಅದನ್ನ ಕಾಪುವಿನಲ್ಲಿ ಒಂದು ಹಂತ ರಾಘವೇಂದ್ರ ಅವರು ದಾಟಿ ಹೋಗಿದ್ದಾರೆ,ಮುಂದಿನ ವೃತ್ತಿ ಸೇವೆ ಯಶಸ್ವಿಯಾಗಲಿ ಎಂಬುದು ಆಶಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಡಿ.ವೈ.ಎಸ್ಪಿ ವಿಜಯ ಪ್ರಸಾದ್ ಮಾತನಾಡಿ” ಆಡಳಿತ ವ್ಯವಸ್ಥೆಗೆ ಕೊಂಡಿಯಾಗಿ ಕೆಲಸ ಮಾಡುವುದು ಸುಲಭವಲ್ಲ- ತಕ್ಷಣದ ಮಾಹಿತಿಗೆ ಸೂಕ್ತ ಸ್ಪಂದಿಸುವ ಕೆಲಸ ರಾಘವೇಂದ್ರ ಅವರಿಂದ ಆಗಿದೆ , ಅನಾಹುತ ನಡೆಯುವ ಮುನ್ನವೇ ಮುಂಜಾಗ್ರತೆಯಿಂದ ಮಾಡಿದ ಕಾರ್ಯ ಇವರಿಂದ ಆಗಿದೆ ಹಾಗಾಗಿ ಅಭಿನಂದನೆ ಎಂದರು.
ಕಾಪು ಎಸೈ ಶ್ರೀ ಶೈಲಾ ಮುರುಗೋಡು ಸ್ವಾಗತಿಸಿ,ಉಪನ್ಯಾಸಕ ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿ, ಎ.ಎಸೈ ರಾಜೇಂದ್ರ ಮಣಿಯಾನಿ ಪ್ರಸ್ತಾವಿಕ ಮಾತುಗಳನ್ನಾಡಿ,ಮನು ಕುಮಾರ್ ವಂದಿಸಿದರು.
ವೇದಿಕೆಯಲ್ಲಿ ,ಪಡುಬಿದ್ರಿ ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ ,ಕಾಪು ಕ್ರೈಂ ಎಸೈ ಭರತೇಶ್,ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…