69 ವರ್ಷದ ಬಳಿಕ ಮತ್ತೆ ಏರ್ ಇಂಡಿಯಾ ಟಾಟಾ ಕಂಪನಿಯ ತೆಕ್ಕೆಗೆ – Vishwanews24
69 ವರ್ಷದ ಬಳಿಕ ಮತ್ತೆ ಏರ್ ಇಂಡಿಯಾ ಟಾಟಾ ಕಂಪನಿಯ ತೆಕ್ಕೆಗೆ ; ಇಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಟಾಟಾ ಕಂಪನಿಗೆ ಹಸ್ತಾಂತರ – Vishwanews24
ನವದೆಹಲಿ: ಕೇಂದ್ರ ಸರ್ಕಾರದ ತನ್ನ ವಿಮಾನಯಾನ ಸಂಸ್ಥೆ ‘ಏರ್ ಇಂಡಿಯಾ’ವನ್ನು ಇಂದು ಟಾಟಾ ಕಂಪನಿಗೆ ಹಸ್ತಾಂತರವಾಗಲಿದೆ.
ಇದಕ್ಕೆ ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಕೂಡ ಸಾಕ್ಷಿಯಾಗಿದ್ದಾರೆ. ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತಿದ್ದಾರೆ.
ಈ ಮೂಲಕ 69 ವರ್ಷದ ಬಳಿಕ ಮತ್ತೆ ಏರ್ ಇಂಡಿಯಾ ಟಾಟಾ ಕಂಪನಿಯ ತೆಕ್ಕೆಗೆ ಸೇರಿದೆ.
ಇದನ್ನೂ ಓದಿ :
ಬೆಂಗಳೂರು : ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ – Vishwanews24
ಕಳೆದ ವರ್ಷದ ಆಕ್ಟೋಬರ್ ತಿಂಗಳಿನಲ್ಲೇ ಟಾಟಾ ಕಂಪನಿಯು ಬಿಡ್ ನಲ್ಲಿ ಏರ್ ಇಂಡಿಯಾವನ್ನ ತನ್ನದಾಗಿಸಿಕೊಂಡಿದೆ. ಇಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಟಾಟಾ ಕಂಪನಿಗೆ ಹಸ್ತಾಂತರ ಮಾಡಲಿದೆ.
ಏರ್ ಇಂಡಿಯಾ ಟಾಟಾ ಕಂಪನಿಗೆ ತೆಕ್ಕೆಗೆ ಹೋಗುವುದರಿಂದ ಇಂದಿನಿಂದ ಟಾಟಾ ಕಂಪನಿಯ ತೆಕ್ಕೆಯಲ್ಲಿ ಮೂರು ಏರ್ ಲೈನ್ಸ್ ಗಳು ಇರಲಿವೆ.
ಈಗಾಗಲೇ ಟಾಟಾ ಕಂಪನಿಯು ವಿಸ್ತಾರಾ ಏರ್ ಲೈನ್ಸ್ ಹಾಗೂ ಏರ್ ಏಷ್ಯಾ ಏರ್ ಲೈನ್ಸ್ ಗಳ ಮಾಲೀಕತ್ವದ ಪಾಲುನ್ನು ಹೊಂದಿದೆ.
ಸರ್ಕಾರವು ಕಳೆದ ವರ್ಷ ಅಕ್ಟೋಬರ್ 8 ರಂದು 18,000 ಕೋಟಿ ರೂಪಾಯಿಗೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ನ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ಗೆ ಮಾರಾಟ ಮಾಡಿತ್ತು.
ಇದನ್ನೂ ಓದಿ :
ಕಾಂಗ್ರೇಸ್ ಗೂ ನನಗೂ ಮುಗಿದ ಅಧ್ಯಾಯ ; ಕಾಂಗ್ರೆಸ್ಗೆ ಗುಡ್ಬೈ ಹೇಳಿದ ಸಿಎಂ ಇಬ್ರಾಹಿಂ – Vishwanews24
