69th National Film Awards 2023 : ಕನ್ನಡದ 777 ಚಾರ್ಲಿ ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ – Vishwanews24
69th National Film Awards 2023 : ಕನ್ನಡದ ಅತ್ಯುತ್ತಮ ಸಿನಿಮಾ ‘777 ಚಾರ್ಲಿ’ಗೆ ರಾಷ್ಟ್ರೀಯ ಪ್ರಶಸ್ತಿ – Vishwanews24
ಬೆಂಗಳೂರು: 2021 ರ ಸಾಲಿನ ಸಿನಿಮಾಗಳ ರಾಷ್ಟ್ರೀಯ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು. ಅದರಲ್ಲಿ ನಮ್ಮ ಕನ್ನಡದ ‘777 ಚಾರ್ಲಿ’ಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಈ ಕುರಿತು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ‘ನನಗೆ ಆಗ್ತಿರುವ ಸಂತಸವನ್ನು ಪದಗಳಲ್ಲಿ ಹೇಳಲು ಆಗ್ತಿಲ್ಲ. ಪ್ರಶಸ್ತಿ ಗೆದ್ದಿರುವುದು ನಮ್ಮ ಇಡೀ ತಂಡಕ್ಕೆ ಹೆಮ್ಮೆಯ ಕ್ಷಣ. ನಮ್ಮ ಶ್ರಮ ಫಲಿಸಿದೆ ಎಂದು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
https://twitter.com/rakshitshetty/status/1694692882568167564?ref_src=twsrc%5Etfw%7Ctwcamp%5Etweetembed%7Ctwterm%5E1694692882568167564%7Ctwgr%5E0944751e0f5ac151a1dd573292ea455d0ce1b5d2%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fkarnataka-breaking-today-kannada-news-live-updates-on-karnataka-politics-congress-siddaramaiah-dk-shivakumar-operation-hasta-cauvery-water-lok-sabha-polls-ayb-652159.html
ಸಂತಸ ಹಂಚಿಕೊಂಡ ನಿರ್ದೇಶಕ ಕಿರಣ್ ರಾಜ್
ಮಂಗಳೂರು: ‘777 ಚಾರ್ಲಿ’ ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಘೋಷಣೆ ಹಿನ್ನೆಲೆ ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಸಂತಸ ಹಂಚಿಕೊಂಡಿದ್ದಾರೆ. ಅಮ್ಮನ ಜೊತೆ ಪ್ರಶಸ್ತಿಯ ಲೈವ್ ಅನೌನ್ಸ್ಮೆಂಟ್ ವಿಡಿಯೋ ನೋಡಿದ ಕಿರಣ್ ರಾಜ್ ಅವರು, ‘ಪ್ರಶಸ್ತಿ ಸಿಕ್ಕಿರೋದು ಬಹಳಷ್ಟು ಖುಷಿಯಾಗಿದೆ. ಇಡೀ ತಂಡಕ್ಕೆ ಚಾರ್ಲಿ ತುಂಬಾ ಸ್ಪೆಷಲ್ ಸಿನಿಮಾ. ಸುಮಾರು ವರ್ಷ ಇಡೀ ತಂಡ ಇದರ ಮೇಲೆ ಎಫರ್ಟ್ ಹಾಕಿದೆ. ದೊಡ್ಡ ಮಟ್ಟದಲ್ಲಿ ಜನ ಸಿನಿಮಾ ನೋಡಿ ಸಕ್ಸಸ್ ತಂದುಕೊಟ್ಟಿದ್ರು, ಇವಾಗ ರಾಷ್ಟ್ರಮಟ್ಟದಲ್ಲಿ ಗೌರವ ಸಿಕ್ತಾ ಇದೆ. ಪ್ರಶಸ್ತಿಯ ಬಗ್ಗೆ ಜಾಸ್ತಿ ನಿರೀಕ್ಷೆ ಇರಲಿಲ್ಲ ದೊಡ್ಡ ಸಿನಿಮಾಗಳು ತುಂಬಾ ಇತ್ತು ಎಂದಿದ್ದಾರೆ.
