75 ಲಕ್ಷ ರೂಪಾಯಿ ವೆಚ್ಚದ ಹಳೇ ಎಂ.ಬಿ.ಸಿ ಕಾಪು ಪೇಟೆ ಭಾಗದ ರಸ್ತೆ ಕಾಮಗಾರಿ ಉದ್ಘಾಟನೆ.
75 ಲಕ್ಷ ರೂಪಾಯಿ ವೆಚ್ಚದ ಹಳೇ ಎಂ.ಬಿ.ಸಿ ಕಾಪು ಪೇಟೆ ಭಾಗದ ರಸ್ತೆ ಕಾಮಗಾರಿ ಉದ್ಘಾಟನೆ.
ಕಾಪು: ಕಾಪು ತಾಲೂಕು ಪುರಸಭಾ ವ್ಯಾಪ್ತಿಯ ಸುಮಾರು ಎಪತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೊಂಡ ಹಳೇ ಎಂಬಿಸಿ ಕಾಪು ಪೇಟೆಭಾಗದ ರಸ್ತೆಯ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು.
ತದನಂತರ ಮಾಧ್ಯಮದವರೊಂದಿಗೆ ಮಾತಾಡಿ ಮುಂದಿನ ದಿನದಲ್ಲಿ ಮತ್ತಷ್ಟು ಹೊಸಕಾಮಗಾರಿಗಳ ಶಿಲನ್ಯಾಸ ಮತ್ತು ಉದ್ಘಾಟನೆ ಕಾಪು ಕ್ಷೇತ್ರಕ್ಕೆ ತರುವಲ್ಲಿ ಪ್ರಮಾಣಿಕ ಪ್ರಯತ್ನದ ಜತೆಗೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಸಬ್ ಇನ್ಸ್ಪೆಕ್ಟರ್ ರಾಜಶೇಖರ್, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ,ಪಿ.ಡಬ್ಲೂಡಿ ಅಧಿಕಾರ ಸವಿತಾ,ಪುರಸಭಾ ಮುಖ್ಯಧಿಕಾರಿ ವೆಂಕಟೇಶ ನಾವುಡ,ಮತ್ತು ಕಾಪು ಪುರಸಭಾ ಸದಸ್ಯರು ಉಪಸ್ಥಿತಿಯಿದ್ದರು.
