800 ಕೆ.ಜಿ. ತೂಕದ ಬೃಹತ್ ಭಗವದ್ಗೀತೆ ನಾಳೆ ಪ್ರಧಾನಿ ಮೋದಿಯಿಂದ ಅನಾವರಣ – Vishwanews24
670 ಪುಟಗಳಿರುವ, 800 ಕೆ.ಜಿ. ತೂಕವಿರುವ ‘ಬೃಹತ್ ಭಗವದ್ಗೀತಾ’ (Astounding Bhagavad Gita) ಎಂದು ಇಸ್ಕಾನ್ ಹೆಮ್ಮೆಯಿಂದ ಕರೆದಿರುವ ಈ ಗ್ರಂಥವು 2.8 ಮೀಟರ್ (9.18 ಅಡಿ) ಉದ್ದ ಮತ್ತು 2 ಮೀಟರ್ (6.5 ಅಡಿ) ಅಗಲವಿದೆ.
Prime Minister Narendra Modi to unveil the ‘Astounding Bhagavad Gita’ on 26th February at the ISKCON Temple, Delhi. The ‘Astounding Bhagavad Gita’, which measures 2.8m x 2m weighs 800 kg, would be the largest Bhagavad Gita to ever be printed pic.twitter.com/HXiV6yFd8n
— Aman Sharma (@AmanKayamHai_ET) February 23, 2019
ವಾಟರ್‌ಪ್ರೂಫ್ ಸಿಂಥಟಿಕ್ ಹಾಳೆಗಳ ಮೇಲೆ 18 ಅತ್ಯುತ್ಕೃಷ್ಟ ಚಿತ್ರಗಳು ಮತ್ತು ಸುಂದರ ವಿನ್ಯಾಸವಿರುವ ಈ ಪುಸ್ತಕವನ್ನು ಇಟಲಿಯ ಮಿಲಾನ್‌ನಲ್ಲಿ ಮುದ್ರಿಸಲಾಗಿದೆ. ಬೃಹತ್ ಗ್ರಂಥಕ್ಕೆ ಸುಮಾರು ₹1.5 ಕೋಟಿ ಖರ್ಚಾಗಿದೆ. ಈ ಮೊತ್ತವನ್ನು ವಿಶ್ವದ ವಿವಿಧ ದೇಶಗಳ ದಾನಿಗಳ ನೆರವಿನಿಂದ ಇಸ್ಕಾನ್‌ನ ಇಟಲಿ ಘಟಕ ಭರಿಸಿದೆ.
ಇದು 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿರದ್ದು, ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಕೀರ್ತಿಗೆ ಪಾತ್ರವಾಗಿದೆ.

