ಉಡುಪಿ

9ರ ತನುಶ್ರೀ ಗಿನ್ನೆಸ್‌ ವಿಶ್ವ ದಾಖಲೆ……………….

ಉಡುಪಿ: ಉದ್ಯಾವರ ಪಿತ್ರೋಡಿಯ ಉದಯಕುಮಾರ್‌-ಸಂಧ್ಯಾ ದಂಪತಿ ಪುತ್ರಿ 9ರ ಹರೆಯದ ಬಾಲೆ ತನುಶ್ರೀ ಪಿತ್ರೋಡಿ ಅವರು ಎ. 7ರಂದು ಗಿನ್ನೆಸ್‌ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಮುಖವನ್ನು ಮುಂದೆ ಮಾಡಿ ಎದೆಭಾಗವನ್ನು ನೆಲದಲ್ಲಿ ಸ್ಥಿರವಿರಿಸಿ ದೇಹದ ಉಳಿದ ಭಾಗಗಳನ್ನು ವರ್ತು ಲಾಕಾರದಲ್ಲಿ ತಿರುಗಿಸುವ ಯೋಗದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡಿರುವ ತನುಶ್ರೀ, ಈ ಹಿಂದಿನ ಪ್ಯಾಲೆಸ್ತೇನ್‌ ದೇಶದ ಹುಡುಗನ ಗಿನ್ನೆಸ್‌ ದಾಖಲೆಯನ್ನು ಮುರಿದಿದ್ದಾರೆ. 2017 ಫೆಬ್ರವರಿಯಲ್ಲಿ ಜೋರ್ಡಾನ್‌ನಲ್ಲಿ ನಡೆದ ಗಿನ್ನೆಸ್‌ ದಾಖಲೆಯಲ್ಲಿ ಪ್ಯಾಲೆಸ್ತೀನ್‌ನ 12 ವರ್ಷದ ಬಾಲಕ ಮಹಮ್ಮದ್‌ ಅಲ್‌ ಶೇಖ್‌ ನಿಮಿಷಕ್ಕೆ 38 ಸುತ್ತು ಯೋಗಭಂಗಿ ಮಾಡಿದ್ದನು. ತನುಶ್ರೀ 42 ಸುತ್ತು ಮಾಡಿ ಗಿನ್ನೆಸ್‌ ಬುಕ್‌ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.

 

ಪಿತ್ರೋಡಿಯ ವೆಂಕಟರಮಣ ನ್ಪೋರ್ಟ್ಸ್ ಕ್ಲಬ್‌ನವರ ಆಶ್ರಯದಲ್ಲಿ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್‌ ಅಧಿಕಾರಿ ಮುಂಬಯಿಯ ಸ್ವಪ್ನಿಲ್‌ ಡಾಂಗ್ರೀಕರ್‌ ಅವರೆದುರು 1 ನಿಮಿಷದ ಯೋಗಭಂಗಿಯನ್ನು ತನುಶ್ರೀ ಪ್ರದರ್ಶಿಸಿದರು. ಇದನ್ನು ದಾಖಲೀಕರಿಸಿಕೊಂಡು ಪರಿಶೀಲಿಸಿಕೊಂಡು 30 ನಿಮಿಷದ ಆನಂತರ ತನುಶ್ರೀ ಗಿನ್ನೆಸ್‌ ದಾಖಲೆ ಮಾಡಿರುವುದನ್ನು ಅಧಿಕಾರಿ ಘೋಷಿಸಿದರು. ತನುಶ್ರೀಗೆ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್‌ನ ದಾಖಲೆಯನ್ನು ಡಾಂಗ್ರೀಕರ್‌ ಹಸ್ತಾಂತರಿಸಿದರು. ತನುಶ್ರೀ ಕಳೆದ ವರ್ಷ ಯೋಗದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್‌ ಸಾಧನೆ ಮಾಡಿದ್ದರು.

ತನುಶ್ರೀ ಅವರ ತಂದೆ ಉದಯ ಕುಮಾರ್‌, ತಾಯಿ ಸಂಧ್ಯಾ, ಗಣ್ಯರಾದ ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ್‌ ಉದ್ಯಾವರ, ಪ್ರವೀಣ್‌ ಪೂಜಾರಿ, ಸಾಧು ಸಾಲ್ಯಾನ್‌, ವಿನಯ ಕರ್ಕೇರ, ನಿರುಪಮಾ ಪ್ರಸಾದ್‌, ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಎನ್‌.ಟಿ. ಅಮೀನ್‌, ಸುಕುಮಾರ್‌, ನಾಗರಾಜ ರಾವ್‌, ರವಿ, ಶ್ಯಾಮ್‌ ಮಲ್ಪೆ, ದಯಾಕರ್‌, ಉಮೇಶ್‌ ಕರ್ಕೇರ, ನಾರಾಯಣ, ಗಿರೀಶ್‌ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಧನೆ ದೇಶಕ್ಕೆ ಅರ್ಪಣೆ
ಬೆಳಗ್ಗೆ, ಸಂಜೆ, ರಾತ್ರಿ ನಾಲ್ಕು ತಿಂಗಳ ಪರ್ಯಂತ ಪ್ರಯತ್ನದಿಂದ ಈ ಸಾಧನೆ ಮಾಡಿದ್ದೇನೆ. ಈ ಸಾಧನೆಯನ್ನು ನಾನು ದೇಶಕ್ಕೆ ಅರ್ಪಿಸುತ್ತೇನೆ. ತಂದೆ, ತಾಯಿಯೇ ನನಗೆ ಗುರುಗಳು. ಮೊಬೈಲ್‌ ಯೂಟ್ಯೂಬ್‌ ವೀಡಿಯೋ ನೋಡಿ ಯೋಗ ಭಂಗಿಯನ್ನು ಕಲಿಯುತ್ತಿದ್ದೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago