9 ಬೇಡಿಕೆಗಳಲ್ಲಿ 8 ಈಡೇರಿಸಿದ್ದೇವೆ, ಸಾರಿಗೆ ನೌಕರರಿಗೆ ಶೇ. 8 ರಷ್ಟು ಹೆಚ್ಚು ಸಂಬಳ ಕೊಡುತ್ತೇವೆ, ಮುಷ್ಕರ ಕೈಬಿಡಿ : ಸಿಎಂ BSY -Vishwanews24
9 ಬೇಡಿಕೆಗಳಲ್ಲಿ 8 ಈಡೇರಿಸಿದ್ದೇವೆ, ಸಾರಿಗೆ ನೌಕರರಿಗೆ ಶೇ. 8 ರಷ್ಟು ಹೆಚ್ಚು ಸಂಬಳ ಕೊಡುತ್ತೇವೆ, ಮುಷ್ಕರ ಕೈಬಿಡಿ : ಸಿಎಂ BSY -Vishwanews24
ಬೆಳಗಾವಿ : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಸಾರಿಗೆ ನೌಕರರಿಗೆ ಶೇ. 8 ರಷ್ಟು ಹೆಚ್ಚು ಸಂಬಳ ಕೊಡುತ್ತೇವೆ ಎಂದು ಹೇಳಿದ್ದೇವೆ. ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಅನುಮತಿ ಪತ್ರ ಸಿಕ್ಕ ತಕ್ಷಣ ಹಣ ಕೊಡ್ತೀವಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಶೇ. 8 ರಷ್ಟು ಸಂಬಳ ಹೆಚ್ಚಳ ಮಾಡಲು ಒಪ್ಪಿಗೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಸಮಸ್ಯೆ ಮುಗಿದ ತಕ್ಷಣ ಹಣವನ್ನು ಕೊಡ್ತೀವಿ ಎಂದರು.
ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಾರಿಗೆ ನೌಕರರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡದೇ ನೌಕರರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿಲ್ಲ , ನಮ್ಮದು ಒಂದೇ ಕುಟುಂಬ : ಕೆ.ಎಸ್.ಈಶ್ವರಪ್ಪ -Vishwanews24
