BIG BREAKING NEWS ಗ್ರಾ.ಪಂ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ಫಿಕ್ಸ್: ಎರಡು ಹಂತಗಳಲ್ಲಿ ಮತದಾನ-vishwanews24
ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಎರಡು ಹಂತಗಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಮೊದಲ ಹಂತಕ್ಕೆ ಡಿಸೆಂಬರ್ 22 ಹಾಗೂ ಎರಡನೇ ಹಂತದಲ್ಲಿ ಡಿಸೆಂಬರ್ 27ಕ್ಕೆ ಮತದಾನ ನಡೆಯಲಿದೆ. ಡಿ.30 ಮತ ಎಣಿಕೆ ನಡೆಯಲಿದೆ.
ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ರಾಜ್ಯದ 5,762 ಗ್ರಾಮ ಪಂಚಾಯಿತಿಗಳ 35, 884 ಕ್ಷೇತ್ರಗಳ 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮೊದಲ ಹಂತದಲ್ಲಿ 113 ತಾಲೂಕುಗಳ 2,930 ಹಾಗೂ 2ನೇ ಹಂತದಲ್ಲಿ 113 ತಾಲೂಕುಗಳ 2,832 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
