BREAKING : ಇದು ನನ್ನ ಕೊನೆಯ ಸೀಸನ್ ; ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ – Vishwanews24

Featured, ರಾಷ್ಟ್ರ ನ್ಯೂಸ್

ಇದು ನನ್ನ ಕೊನೆಯ ಸೀಸನ್ ; ಟೆನಿಸ್​ಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ – Vishwanews24

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ  ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆ ಆಗಮಿಸಿದ ಸಾನಿಯಾ ಮಿರ್ಜಾ, ಇದು ತನ್ನ ಕೊನೆಯ ಋತು ಎಂದು ಹೇಳಿದ್ದು, ಈ ಮೂಲಕ 2022ರಲ್ಲಿ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬುಧವಾರವೇ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತ್ರ ಅವರು ಈ ಹೇಳಿಕೆಯನ್ನ ನೀಡಿದರು. ಇದು ತನ್ನ ಕೊನೆಯ ಸೀಸನ್ ಎಂದು ಸಾನಿಯಾ ಮಿರ್ಜಾ ಹೇಳಿದರು.

ಪಂದ್ಯದ ನಂತರ, ‘ನಾನು ಉತ್ತಮವಾಗಿ ಆಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಆದ್ರೆ, ಈಗ ದೇಹವು ಅದನ್ನ ಆ ರೀತಿ ಬೆಂಬಲಿಸಲು ಸಾಧ್ಯವಿಲ್ಲ’ ಎಂದು ಸಾನಿಯಾ ಮಿರ್ಜಾ ಹೇಳಿದರು. ಇದು ದೊಡ್ಡ ಹಿನ್ನಡೆಯಾಗಿದೆ. 2003ರಿಂದ ಅಂತಾರಾಷ್ಟ್ರೀಯ ಟೆನಿಸ್ ಆಡುತ್ತಿರುವ ಸಾನಿಯಾ ಮಿರ್ಜಾ ಸುಮಾರು ಎರಡು ದಶಕಗಳ ನಂತರ ಅಂಕಣದಿಂದ ನಿರ್ಗಮಿಸಲಿದ್ದಾರೆ.

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ರದ್ದುಗೊಳಿಸಿ : ಸರ್ಕಾರಕ್ಕೆ ಪ್ರತಾಪ್ ಸಿಂಹ  ಒತ್ತಾಯ – Vishwanews24

 

Leave a Reply