BREAKING NEWS ಕಾಪು ಬಿಜೆಪಿಯಲ್ಲಿ ಸೀಟಿನ ವಿಚಾರದ ಮಹತ್ತರ ತಿರುವು, ಇಬ್ಬರ ಪೈಪೋಟಿ ಮಹಿಳೆಗೆ ಲಾಭ!….?
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಿದ್ದಂತೆ ಕಾಪು ಬಿಜೆಪಿಯಲ್ಲಿ ಹೊಸ ರಾಜಕೀಯ ಅಲೆಯೊಂದು ಎಬ್ಬಿದೆ, ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಲಾಲಜಿ ಆರ್ ಮೆಂಡನ್ ಟಿಕೆಟ್ ಪೈಪೋಟಿಗೆ ತೆರೆ ಎಳೆಯಲು ಬಿಜೆಪಿ ಹೈಕಾಮಂಡ್ ಮುಂದಾಗಿದೆ ಎನ್ನಲಾಗುತ್ತಿದೆ.
ಉಡುಪಿಯಲ್ಲಿ ಸದ್ದು ಮಾಡಿದ್ದ ಮಹಿಳೆ ನಯನ ಗಣೇಶ್ ಹೆಸರನ್ನು ಕಾಪುವಿಗೆ ಜೋಡಿಸುವ ಕಾರ್ಯ ನಡೆಯಬಹುದು, ಇಲ್ಲವೇ ಬಿಲ್ಲವ ವಿನಯ್ ಕುಮಾರ್ ಸೊರಕೆಯೆದುರು ಮಹಿಳಾ ಬಿಲ್ಲವ ನಾಯಕಿ ಗೀತಾಂಜಲಿ ಸುವರ್ಣರನ್ನು ಕಣಕ್ಕಿಳಿಸುವ ಪ್ರಯತ್ನವೂ ನಡೆಯಬಹುದಾಗಿದೆ. ಈ ಎಲ್ಲದರ ನಡುವೇ ವಿನಯ್ ಕುಮಾರ್ ಸೊರಕೆಯನ್ನ ಎದುರಿಸಲು ಕಾಪುವಿನಲ್ಲಿ ಸಂಘಪರಿವಾರವೂ ಎಲ್ಲಾ ರೀತಿಯ ಪ್ರಯತ್ನವೂ ನಡೆಸುತ್ತಿದೆ ಎನ್ನುವ ಮಾಹಿತಿಯು ಲಭ್ಯವಾಗಿದೆ.

ಮೊಗವೀರ ಪುರುಷನ ಬದಲು ಮಹಿಳೆ
ಹೌದು ಕಾರ್ಯಕರ್ತರ ಹುಮ್ಮಸನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಮತ್ತು ಈಗಾಗಲೇ ಎರಡು ಬಾರಿ ಶಾಸಕರಾಗಿ ಹೊರಹೊಮ್ಮಿದ ಲಾಲಜಿ ಆರ್ ಮೆಂಡನ್ ರಾಜ್ಯದಲ್ಲಿಯೇ ಒರ್ವ ಮೊಗವೀರ ಶಾಸಕನಾದ ಹಿನ್ನಲೆಯಿರುವುದರಿಂದ ಮತ್ತು ಉಡುಪಿ, ಕಾಪುವಿನಲ್ಲಿ ಮೊಗವೀರ ವೋಟ್ ನಿರ್ಣಾಯಕವಾಗಿರುವುದರಿಂದ ಬಿಜೆಪಿಯಲ್ಲಿ ಒಂದು ಸೀಟು ಮೊಗವೀರರಿಗೆ ನೀಡಬೇಕಾಗುತ್ತದೆ ಮತ್ತು ಮಹಿಳಾಮಣಿಯರ ಮತವನ್ನ ಬಿಜೆಪಿ ತನ್ನತ ಸೆಳೆಯುವ ಉದ್ದೇಶದಿಂದ ಲಾಲಜಿ ಬದಲು ನಯನ ಗಣೇಶ್ ರನ್ನು ಕಣಕಿಳಿಸಬಹುದೆನ್ನುವ ಮಾತು ಕೂಡ ಕೇಳಿ ಬರುತ್ತಿದೆ.ಇದರಲ್ಲಿ ಯಾವುದೇ ಅನುಮಾನವೇನಿಲ್ಲ ಒಂದು ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆದುರುಳಿಸುವ (ಅಂದರೇ ಮಹಿಳಾ ಮತ ಮತ್ತು ಮೋಗವೀರ ಮತವನ್ನು )ಪ್ರಯತ್ನವನ್ನು ಬಿಜೆಪಿ ಮಾಡಬಹುದಾಗಿದೆ.

ಬಿಲ್ಲವನಿಗೆ ಬಿಲ್ಲವರಿಂದಲೇ ಎದುರೇಟು.
ಹೌದು ವಿನಯ್ ಕುಮಾರ್ ಸೊರಕೆ ಬಿಲ್ಲವ ನಾಯಕನಾಗಿರುವುರಿಂದ ಅವರನ್ನ ಮಣಿಸಲು ಬಿಲ್ಲವ ಮಹಿಳಾ ನಾಯಕಿ, ರಾಜ್ಯ ಮಹಿಳಾ ಮೋರ್ಚದ ಕಾರ್ಯದರ್ಶಿ, ಹಾಲಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಮತ್ತು ಎಲ್ಲಾರೊಂದಿಗೆ ಸೌಮ್ಯ ಸ್ವಭಾವದಿಂದ ಗೌರವಿಸುವ ಗೀತಾಂಜಲಿ ಸುವರ್ಣರನ್ನು ಕಣಕ್ಕಿಳಿಸಿಬಹುದಾಗಿದೆ. ಇದರಿಂದ ಜಾತಿಗುಂಗಿನ ಗೊಜಲು ದೂರವಾಗಿ ಬಂಟರು ಮತ್ತು ಮೊಗವೀರರು ಸೇರಿದಂತೆ ಎಲ್ಲರೂ ಒಮ್ಮತವಾಗಿ ಸುವರ್ಣ ರನ್ನ ಬೆಂಬಲಿಸಬಹುದೆನ್ನುವ ಲೆಕ್ಕಚಾರ ಕೂಡ ಹೈಕಾಮಂಡ್ ಬಳಿಯಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಗುರ್ಮೆಯ ನಡೆ
ಸಮಾಜಿಕವಾಗಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಗುರ್ಮೆ ಸುರೇಶ್ ಶೆಟ್ಟಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಪೈಪೋಟಿ ನಡೆಸಿದ್ದರೂ ಕೂಡ ಕಡೆ ಗಳಿಗೆಯಲ್ಲಿ ಅದು ವಿನಯ್ ಕುಮಾರ್ ಸೊರಕೆಯ ಪಾಲಾಯಿತು. ತದನಂತರ ಗುರ್ಮೆ ಕಾನಿಸಿಕೊಂಡದ್ದು ಭಾರತೀಯ ಜನತಾ ಪಾರ್ಟಿಯಲ್ಲಿ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪನವರ ಮತ್ತು ರಾಜ್ಯ ಹಾಗೂ ಕೇಂದ್ರ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಗುರ್ಮೆ ತದನಂತರದ ದಿನದಲ್ಲಿ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡು ಭಾಜಪದ ಕಾರ್ಯಕರ್ತರಿಗೆ ಮತ್ತು ಸಮಾಜಕ್ಕೆ ಚಿರಪರಿಚಿರಾದರು.
ಈ ಭಾರಿ ಬಿಜಪಿ ಸೀಟ್ ಆಕಾಂಕ್ಷಿಯಾಗಿರುವ ಗುರ್ಮೆಗೆ ಟಿಕೆಟ್ ಸಿಕ್ಕರೆ ವಿನಯ್ ಕುಮಾರ್ ಸೊರಕೆಯೆಂಬ ಗೆಲುವಿನ ಕುದುರೆಗೆ ಲಗಾಮು ಹಾಕುತ್ತಾರೆ ಮತ್ತು ಹತ್ತು ಸಾವಿರಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲುವುದು ಪಕ್ಕಾ ಅನ್ನುವ ಮಾತು ಕಾರ್ಯಕರ್ತರ ವಲಯದಿಂದ ಕೇಳಿಬರುತ್ತಿದೆ. ಒಂದು ವೇಳೆ ಟಿಕೆಟ್ ಸಿಗದೆಹೋದಲ್ಲಿ ಗುರ್ಮೆಯ ನಡೆ ಯಾವ ರೀತಿ ಇರುತ್ತೆ ಎಂಬುದನ್ನ ಕಾದು ನೋಡಬೇಕಾಗಿದೆ.

ಲಾಲಜಿಗೆ ಎಮ್.ಎಲ್.ಸಿ..?
ಕಡೆ ಪಕ್ಷ ಲಾಲಜಿ.ಆರ್ ಮೆಂಡನ್ ರಿಗೆ ಈ ಭಾರಿ ಟಿಕೆಟ್ ವಂಚಿತರಾದರೆ ಮೊಗವೀರ ನಾಯಕ ರಾಜ್ಯದಲ್ಲಿ ಬೇಕೆನ್ನುವ ಉದ್ದೇಶದಿಂದ ಮತ್ತು ಸಮಾಧಾನ ಮಾಡುವ ನಿಟ್ಟಿನಲ್ಲಿ ಸರ್ಕಾರ ಗದ್ದುಗೆಯೇರಿದರೆ ಮಾಜಿ ಶಾಸಕ ಮತ್ತು ಹಾಲಿ ಶಾಸಕ ಟಿಕೆಟ್ ವಂಚಿತರಿಗೆ ಸೂಕ್ತ ಸ್ಥಾನಮಾನದ ಗೌರವ ನೀಡುತ್ತೆವೆಂದು ಇಂದು ಯಡಿಯೂರಪ್ಪನವರು ಹೇಳಿದ್ದಾರೆ, ಆ ಸರದಿ ಪ್ರಕಾರ ಮೆಂಡನ್ ರನ್ನು ಎಮ್.ಎಲ್.ಸಿ ಮಾಡುವ ಸಾಧ್ಯತೆಯೂ ಹೆಚ್ಚಿದೆ.

ಒಟ್ಟಾರೆಯಾಗಿ ಎರಡನೇ ಪಟ್ಟಿಯಲ್ಲಿಯೂ ಕೂಡ ಕಾಪು ಮತ್ತು ಉಡುಪಿಯ ಹೆಸರು ಬಾರದಿರುವುದರಿಂದ ಕಾರ್ಯಕರ್ತರ ಕೂತುಹಲ ಮತ್ತಷ್ಟು ಕೆರಳಿಸಿದ್ದು. ಎರಡೂ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಮತ್ತು ಗೆಲ್ಲುವ ಕುದುರೆ ಯಾವುದೆಂಬುದನ್ನ ಕಾದು ನೋಡಬೇಕಾಗಿದೆ.
