BREAKING NEWS – ಕೇಂದ್ರದ ಸುತ್ತೋಲೆ ಪ್ರಕಾರ ಸುರತ್ಕಲ್ ಟೋಲ್ ಸಂಗ್ರಹ ಹೆಜಮಾಡಿಯಲ್ಲಿ ಸಂಗ್ರಹ ಮಾಡುವುದು ಫಿಕ್ಸ್- ಆದರೆ ಸಂಗ್ರಹ ದಿನ ನಿಗದಿಯಾಗಿಲ್ಲ : ಉಡುಪಿ ಜಿಲ್ಲಾಧಿಕಾರಿ : vishwanews24
ಕೇಂದ್ರದ ಸುತ್ತೋಲೆ ಪ್ರಕಾರ ಸುರತ್ಕಲ್ ಟೋಲ್ ಸಂಗ್ರಹ ಹೆಜಮಾಡಿಯಲ್ಲಿ ಸಂಗ್ರಹ ಮಾಡುವುದು ಫಿಕ್ಸ್- ಆದರೆ ದಿನ ನಿಗದಿಯಾಗಿಲ್ಲ : ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ : vishwanews24
ಉಡುಪಿ: ಸುರತ್ಕಲ್ ಟೋಲ್ ಹಣವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಸಂಗ್ರಹ ಮಾಡುವ ವಿಚಾರವಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಪ್ರತಿಕ್ರಿಯೆ ನೀಡಿದರು.
ಸುರತ್ಕಲ್ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಗೇಟ್ ಜತೆ ವಿಲೀನ ಮಾಡುವ ಬಗ್ಗೆ ಕೇಂದ್ರಸರ್ಕಾರದ ಗಜೆಟ್ ನೋಟಿಫಿಕೆಶನ್ ಆಗಿದೆ ಆದರೆ ಸಂಗ್ರಹ ದಿನ ನಿಗದಿಯಾಗಿಲ್ಲ ಎಂದರು.

ಮುಂದಿನ ಸಭೆಯ ನಂತರ ಯಾವುದೇ ಬೆಳವಣಿಗೆಯಾದರೂ ಮಾಹಿತಿ ನೀಡುತ್ತೇವೆ ಮತ್ತು ಇದುವರೆಗೆ ಜಿಲ್ಲಾಧಿಕಾರಿ ಕಚೇರಿಗೆ ಯಾವುದೇ ರೀತಿಯ ಸಾರ್ವಜನಿಕರಿಂದ ಮನವಿ ಬಂದಿಲ್ಲ ಎಂದರು.
