BREAKING NEWS_ಮೂಳೂರು ಬಿಲ್ಲವ ಸಂಘದ ಗುರು ಮಂದಿರಕ್ಕೆ ನುಗ್ಗಿದ ಕಳ್ಳರು -ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳವು.vishwanews24
ಮೂಳೂರು ಬಿಲ್ಲವ ಸಂಘಕ್ಕೆ ನುಗ್ಗಿದ ಕಳ್ಳರು -ಕಾಣಿಕೆ ಡಬ್ಬಿಯಲ್ಲಿದ ನಗದು ಕಳವು.
ಕಾಪು :ಇಲ್ಲಿನ ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ನಾರಾಯಣಗುರು ಮಂದಿರಕ್ಕೆ ತಡರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಕಾಣಿಕೆ ನಗದನ್ನು ಕಳವು ಮಾಡಿದ ಘಟನೆ ಗುರುವಾರ ನಡೆದಿದೆ.
ಪೂಜೆಗಾಗಿ ಅರ್ಚಕ ಬೆಳಗ್ಗಿನ ಜಾವ ಮಂದಿರಕ್ಕೆ ಬರುವ ಸಮಯದಲ್ಲಿ ಈ ಘಟನೆ ನೋಡಿ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸ್ ಪರಿಶೀಲನೆ ನಡೆಸುತ್ತಿದ್ದಾರೆ.





