Budget 2022 : ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು 1 ಲಕ್ಷ ಕೋಟಿ ರೂ. ಮಂಜೂರು : ರಾಷ್ಟ್ರಪತಿ – Vishwanews24

Featured, ರಾಷ್ಟ್ರ ನ್ಯೂಸ್

Budget 2022 : ದೇಶದಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು 1 ಲಕ್ಷ ಕೋಟಿ ರೂ. ಮಂಜೂರು : ರಾಷ್ಟ್ರಪತಿ – Vishwanews24

ದೆಹಲಿ: ಇಂದು 2022ರ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ದಿನವಾಗಿದ್ದು, ರಾಷ್ಟ್ರಪತಿಗಳು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದಲ್ಲಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು 1,000 ಯೋಜನೆಗಳಿಗೆ ಅಂದಾಜು 1 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.

ಕೃಷಿ ಮೂಲಸೌಕರ್ಯಗಳನ್ನು ಸುಧಾರಿಸಲು, ಭಾರತದಲ್ಲಿ ಕೃಷಿ ವಲಯವನ್ನು ಉತ್ತೇಜಿಸಲು 1,000 ಯೋಜನೆಗಳಿಗೆ ಅಂದಾಜು 1 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರವು ‘ಅಂತ್ಯೋದಯ’ದ ಮೂಲ ಮಂತ್ರವನ್ನು ನಂಬುತ್ತದೆ. ಇದರಲ್ಲಿ ಸಾಮಾಜಿಕ ನ್ಯಾಯ, ಸಮಾನತೆ, ಗೌರವ ಮತ್ತು ಸಮಾನ ಅವಕಾಶಗಳಿವೆ. ಪಿಎಂ ಆವಾಸ್ ಯೋಜನೆ, ಪಿಎಂ ಸ್ವಾನಿಧಿ, ಹರ್ ಘರ್ ಜಲ್ ಮತ್ತು ಪಿಎಂ ಸ್ವಾಮಿತ್ವದಂತಹ ಯೋಜನೆಗಳು ದೇಶದಾದ್ಯಂತ ನಾಗರಿಕರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತಿವೆ. ಗ್ರಾಮೀಣ ಆರ್ಥಿಕತೆ ಮತ್ತು ದೇಶದ ರೈತರನ್ನು ಸಬಲೀಕರಣಗೊಳಿಸಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ ಎಂದರು.

ಇದನ್ನೂ ಓದಿ :

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ಅವರು ಅಧಿಕಾರ ಸ್ವೀಕಾರ – Vishwanews24

Leave a Reply