Budget 2023 : ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಳ – Vishwnaews24

Featured, ರಾಷ್ಟ್ರ ನ್ಯೂಸ್

Budget 2023 : ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಳ

ನವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಅವರು ಇಂದು ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷದ ನಮ್ಮ ಬೆಳವಣಿಗೆಯನ್ನು 7.0% ಎಂದು ಅಂದಾಜಿಸಲಾಗಿದೆ, ಇದು ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದ ಉಂಟಾದ ಬೃಹತ್ ಜಾಗತಿಕ ಮಂದಗತಿಯ ಹೊರತಾಗಿಯೂ ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ ಅಂತ ತಿಳಿಸಿದರು.

2014 ರಿಂದ ಭಾರತದಾದ್ಯಂತ 157 ಹೊಸ ನರ್ಸಿಂಗ್‌ ಕಾಲೇಜು ಆರಂಭವಾಗಿದೆ ಅಂತ ತಿಳಿಸಿದರು. ಇದೇ ವೇಳೆ ಅವರುಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಅಂತ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು ಅಂಥ ಅವರು ತಿಳಿಸಿದಿರು.

ಪರಿಹಾರ ನೀಡಲು ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಫಾಝಿಲ್‌ ಕುಟುಂಬದ ಹೆಸರೂ ಇದೆ , ಅವರಿಗೂ ಪರಿಹಾರ ಸಿಗಲಿದೆ : ಶಾಸಕ ಭರತ್ ಶೆಟ್ಟಿ  – Vishwanews24

BUDGET 2023 : ಕರಕುಶಲಕುರ್ಮಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಪಿಎಂ ವಿಶ್ವಕರ್ಮ ಕೌಶಲ್ಯ ಯೋಜನೆ’ ಜಾರಿಗೆ – Vishwanews24

Leave a Reply