BUDGET 2026 : ವಸತಿ, ಕಾರ್ಮಿಕ ಕಲ್ಯಾಣ, ಜಲಸಂಪನ್ಮೂಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಲಯಗಳಿಗೆ ಬಂಪರ್ ಕೊಡುಗೆ – vishwanews24
BUDGET 2026 : ರಾಜ್ಯದ ರೈತರಿಗೆ ಗುಡ್ ನ್ಯೂಸ್ – `ಗಂಗಾ ಕಲ್ಯಾಣ ಯೋಜನೆ’ಯಡಿ ಸಹಾಯಧನ 1,50,000 ರೂ.ಗೆ ಕ್ಕೆ ಏರಿಕೆ
ಬೆಂಗಳೂರು: “ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ಘೋಷವಾಕ್ಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ವಸತಿ, ಕಾರ್ಮಿಕ ಕಲ್ಯಾಣ, ಜಲಸಂಪನ್ಮೂಲ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ವಲಯಗಳಿಗೆ ಬಂಪರ್ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
ವಸತಿ ಮತ್ತು ಮೂಲಸೌಕರ್ಯ
ಮನೆಗಳ ನಿರ್ಮಾಣ: ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ. ಹಿಂದಿನ ಸರ್ಕಾರ ಅನುದಾನವಿಲ್ಲದೆ ಮಂಜೂರು ಮಾಡಿದ್ದ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಕ್ರಮ.
ಅಂತಾರಾಷ್ಟ್ರೀಯ ಕ್ರೀಡಾಂಗಣ: ‘ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ’ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ.
ಇದನ್ನೂ ಓದಿ:
ರಾಜ್ಯ ಬಜೆಟ್ 2026 : ಕುಕ್ಕೆ, ಕೊಲ್ಲೂರು ದೇವಾಲಯಗಳ ಮೂಲಸೌಕರ್ಯ ಅಭಿವೃದ್ದಿಗೆ ಬಜೆಟ್‌ನಲ್ಲಿ ಘೋಷಣೆ – vishwanews24
ರಿಯಾಯಿತಿ ದರದಲ್ಲಿ ನಿವೇಶನ: ‘ನಮ್ಮ ಮನೆ’ ಯೋಜನೆಯಡಿ ಮುಂದಿನ 2 ವರ್ಷಗಳಲ್ಲಿ 50,000 ನಿವೇಶನಗಳ ವಿತರಣೆ.
ರೈತರು ಮತ್ತು ಸಹಕಾರ
ಶೂನ್ಯ ಬಡ್ಡಿ ಸಾಲ: 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಒಟ್ಟು ರೂ. 30,000 ಕೋಟಿ ಕೃಷಿ ಸಾಲ ವಿತರಣೆ ಗುರಿ.
ಎಪಿಎಂಸಿ ಡಿಜಿಟಲೀಕರಣ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಂಪೂರ್ಣ ಡಿಜಿಟಲೀಕರಣಕ್ಕಾಗಿ ರೂ. 10 ಕೋಟಿ ವೆಚ್ಚದಲ್ಲಿ ಇಆರ್‌ಪಿ (ERP) ವ್ಯವಸ್ಥೆ ಜಾರಿ.
ಜಲಸಂಪನ್ಮೂಲ
ಮೇಕೆದಾಟು ಯೋಜನೆ: ಪರಿಷ್ಕೃತ ಡಿಪಿಆರ್ (DPR) ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅರಣ್ಯ ಇಲಾಖೆ ಅನುಮೋದನೆಗೆ ಶೀಘ್ರ ಪ್ರಸ್ತಾವನೆ.
ಎತ್ತಿನಹೊಳೆ: 2ನೇ ಹಂತದ 18.73 ಕಿ.ಮೀ ಕಾಲುವೆ ಕಾಮಗಾರಿಗಳ ಶೀಘ್ರ ಪೂರ್ಣ.
ಹೊಸ ಜಲಾಶಯ: ಕೊರಟಗೆರೆ ತಾಲೂಕಿನ ವಡೇರಹಳ್ಳಿ ಸಮೀಪ ಹೆಚ್ಚುವರಿ ನೀರು ಸಂಗ್ರಹಕ್ಕೆ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣ.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ
ಸ್ವಂತ ಕಟ್ಟಡಗಳು: 30 ಕ್ರೈಸ್ (CREIS) ವಸತಿ ಶಾಲೆಗಳಿಗೆ ರೂ. 660 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ.
ಬೌದ್ಧ ಅಭಿವೃದ್ಧಿ ನಿಗಮ: ಸಮಾಜ ಕಲ್ಯಾಣ ಇಲಾಖೆಯಡಿ ಹೊಸ ನಿಗಮ ಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟು ರೂ. 1,500 ಕೋಟಿ ಅನುದಾನ.
ಗಂಗಾ ಕಲ್ಯಾಣ: ಕೊಳವೆಬಾವಿ ವಿದ್ಯುದ್ದೀಕರಣ ಸಹಾಯಧನ ರೂ. 75,000 ದಿಂದ ರೂ. 1,50,000 ಕ್ಕೆ ಏರಿಕೆ.
ಎಸ್‌ಟಿ (ST) ಕಲ್ಯಾಣ: ಪ್ರತ್ಯೇಕ ‘ಪರಿಶಿಷ್ಟ ಪಂಗಡಗಳ ಆಯೋಗ’ ಸ್ಥಾಪನೆ, 50 ಹೊಸ ವಿದ್ಯಾರ್ಥಿ ನಿಲಯಗಳು ಮತ್ತು ನಿರುದ್ಯೋಗಿ ಯುವಕ/ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಆರಂಭಿಸಲು ಶೇ.75 (ಅಥವಾ 4 ಲಕ್ಷ ರೂ.) ಸಹಾಯಧನ.
ಇದನ್ನೂ ಓದಿ:
ರಾಜ್ಯ ಬಜೆಟ್ 2026 : ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ ಸಿದ್ದರಾಮಯ್ಯ – vishwanews24
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುಗೆ: 1,39,844 ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರಿಗೆ ಹೆಚ್ಚುವರಿ 1 ಜೊತೆ ಸಮವಸ್ತ್ರ ವಿತರಣೆ.
ಪ್ರೋತ್ಸಾಹಧನ ಹೆಚ್ಚಳ: ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವೇಶ್ಯಾವಾಟಿಕೆಗೊಳಗಾದವರ ಆದಾಯೋತ್ಪನ್ನ ಚಟುವಟಿಕೆಗಳ ಪ್ರೋತ್ಸಾಹಧನ ರೂ. 45,000 ಕ್ಕೆ ಹೆಚ್ಚಳ.
ಮಾದಕ ವ್ಯಸನ ಮುಕ್ತ ಕೇಂದ್ರ: 18 ವರ್ಷದೊಳಗಿನ ಮಕ್ಕಳಿಗಾಗಿ ನಿಮ್ಹಾನ್ಸ್ (NIMHANS) ಮತ್ತು ಡಿಮ್ಹಾನ್ಸ್ (DIMHANS) ಸಹಯೋಗದಲ್ಲಿ ಪುನರ್ವಸತಿ ಕೇಂದ್ರಗಳ ಆರಂಭ.
ಕಾರ್ಮಿಕ ಕಲ್ಯಾಣ
ಕೌಶಲ್ಯ ತರಬೇತಿ ಅಕಾಡೆಮಿ: ಕಟ್ಟಡ ಕಾರ್ಮಿಕರಿಗಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ರೂ. 200 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೌಶಲ್ಯ ತರಬೇತಿ ಕೇಂದ್ರ.
ಶಿಕ್ಷಣಕ್ಕೆ ಒತ್ತು: ಕಾರ್ಮಿಕರ ಮಕ್ಕಳಿಗಾಗಿ ರೂ. 600 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ (GTTC) ಕೇಂದ್ರಗಳು ಹಾಗೂ 62 ನೂತನ ‘ಶ್ರಮಿಕ ವಸತಿ ಶಾಲೆ’ಗಳ ಆರಂಭ.
ಕಾಯಕ ಭಾಗ್ಯ: ಅಸಂಘಟಿತ ಕಾರ್ಮಿಕರಿಗಾಗಿ ರೂ. 5 ಕೋಟಿ ವೆಚ್ಚದಲ್ಲಿ ಆನ್‌ಲೈನ್ ಉದ್ಯೋಗ ವಿನಿಮಯ ಕೇಂದ್ರ
ಇದನ್ನೂ ಓದಿ:
ರಾಜ್ಯ ಬಜೆಟ್ 2026 : ರಾಜ್ಯದ ಎಲ್ಲಾ ಗ್ರಾ. ಪಂ. ಮಹಾತ್ಮ ಗಾಂಧಿ ಮರುನಾಮಕರಣ : ಸಿಎಂ ಸಿದ್ದರಾಮಯ್ಯ – vishwanews24
