BUDGET BREAKING: ಸಿಎಂ ಸಿದ್ಧರಾಮಯ್ಯ 16ನೇ ಬಜೆಟ್ ಮಂಡನೆ ಆರಂಭ – vishwanews24

Featured, ರಾಜ್ಯ ನ್ಯೂಸ್

BUDGET BREAKING: ಸಿಎಂ ಸಿದ್ಧರಾಮಯ್ಯ 16ನೇ ಬಜೆಟ್ ಮಂಡನೆ ಆರಂಭ

ಬೆಂಗಳೂರು: ವಿಧಾನಸೌಧ ಸಿಎಂ ಸಿದ್ಧರಾಮಯ್ಯ ಆಗಮಿಸಿದ್ದಾರೆ. ಮೊಣಗಾಲು ನೋವಿನಿಂದ ಬಳಲುತ್ತಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಇಂದು ಮೊದಲ ಹತ್ತು ನಿಮಿಷಗಳ ಕಾಲ ರಾಜ್ಯ ಬಜೆಟ್ ಅನ್ನು ನಿಂತೇ ಮಂಡಿಸಲಿದ್ದಾರೆ. ಆ ಬಳಿಕ ಇಡೀ ಬಜೆಟ್ ಅನ್ನು ಕುಳಿತೇ ಮಂಡನೆ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 16ನೇ ಬಜೆಟ್ ಅನ್ನು ಇಂದು ಮಂಡಿಸುತ್ತಿದ್ದಾರೆ. ಈಗಾಗಲೇ ಆರ್ಥಿಕ ಇಲಾಖೆಯ ಅಧಿಕಾರಿಗಳಿಂದ ಬಜೆಟ್ ಹಸ್ತಪ್ರತಿಯನ್ನು ಪಡೆದಿರುವಂತ ಅವರು, ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮೋದನೆಯನ್ನು ಪಡೆದಿದ್ದಾರೆ.

ಬಜೆಟ್‌ಗೂ ಮುನ್ನ ಬಿಜೆಪಿ, ಜೆಡಿಎಸ್ ಪ್ರತಿಭಟನೆ – vishwanews24

ಇದೀಗ ವಿಧಾನಸೌಧಕ್ಕೆ ಆಗಮಿಸಿರುವಂತ ಸಿಎಂ ಸಿದ್ಧರಾಮಯ್ಯ ಅವರು ತಮ್ಮ 16ನೇ ಚೊಚ್ಚಲ ಬಜೆಟ್ ಮಂಡನೆಯನ್ನು ಆರಂಭಿಸಿದ್ದಾರೆ. ಮೊಣಕಾಲಿನ ನೋವಿನ ಕಾರಣದಿಂದಾಗಿ ಮೊದಲ ಹತ್ತು ನಿಮಿಷ ನಿಂತು ಬಜೆಟ್ ಮಂಡನೆ ಮಾಡಲಿರುವಂತ ಅವರು, ಆ ಬಳಿಕ ಮುಂದುವರೆದ ಬಜೆಟ್ ಅನ್ನು ಕುಳಿತೇ ಮಾಡಲಿದ್ದಾರೆ.

Leave a Reply