ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದ ಗುಜರಾತ್‌ ಶಾಲೆಯಲ್ಲಿ ಹಾಜರಾತಿ ವೇಳೆ ಮಕ್ಕಳು ಜೈಹಿಂದ್‌, ಜೈಭಾರತ್ ಎಂದು ಹೇಳುತ್ತಾರೆ..

ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದ ಗುಜರಾತ್‌ ಶಾಲೆಯಲ್ಲಿ ಹಾಜರಾತಿ ವೇಳೆ ಮಕ್ಕಳು ಜೈಹಿಂದ್‌, ಜೈಭಾರತ್ ಹೇಳುತ್ತಾರೆ ಅಹ್ಮದಾಬಾದ್‌ : ಗುಜರಾತ್‌ ಶಾಲಾ ಮಕ್ಕಳು ಇಂದು ಜನವರಿ 1 ರಿಂದ ತರಗತಿ ಶಿಕ್ಷಕರು ಹಾಜರಿ ಕರೆಯುವಾಗ ‘ಪ್ರಸೆಂಟ್‌ ‘ ಎನ್ನುವಂತಿಲ್ಲ. ಅವರು ‘ಜೈಹಿಂದ್‌’ […]

ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಕಾಂಗ್ರೆಸ್​​ಗೆ ಬಿಎಸ್​ಪಿ ಎಚ್ಚರಿಕೆ

ನವದೆಹಲಿ :  ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆ ನೀಡಿರುವ ಬೆಂಬಲವನ್ನು  ಹಿಂಪಡೆಯುವುದಾಗಿ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಬೆದರಿಕೆಯೊಡ್ಡಿದೆ. ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಸಂದರ್ಭ ಉಭಯ ರಾಜ್ಯಗಳಲ್ಲಿ ‘ಕೆಲವು ಅಮಾಯಕರ’ ಮೇಲೆ ಪ್ರಕರಣ ದಾಖಲಾಗಿದೆ. ಅವುಗಳನ್ನು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೂಡಲೇ […]

ಬಾಲಿವುಡ್ ನ ಖ್ಯಾತ ಹಿರಿಯ ನಟ ಖಾದರ್ ಖಾನ್ ನಿಧನ..

ಹೊಸದಿಲ್ಲಿ,: ಬಾಲಿವುಡ್‌ನ ಹಿರಿಯ ನಟ ಖಾದರ್ ಖಾನ್ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆನಡಾದ ಆಸ್ಪತ್ರೆಯೊಂದರಲ್ಲಿ ಸೋಮವಾರ(ಡಿ.31) ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. “ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ತಂದೆ ಸಂಜೆ 6 ಗಂಟೆಗೆ ಕೆನಡಾ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಮಧ್ಯಾಹ್ನದ […]

ಹೊಸ ವರ್ಷಕ್ಕೆ ಎಲ್‌ಪಿಜಿ ಗ್ರಾಹಕರಿಗೆ ಮೋದಿ ಸರಕಾರದಿಂದ ಸಿಹಿಸುದ್ದಿ ..

ನವದೆಹಲಿ: ದೇಶದ ಜನತೆ ಹೊಸ ವರ್ಷವನ್ನು ಬರಮಾಡಿಕೊಂಡರೆ ಈ ಮಧ್ಯೆ ಕೇಂದ್ರ ಸರ್ಕಾರ ದೇಶದ ಜನತೆಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ.ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 5.91 ರು.ಗಳ […]

ನಾಳೆಯಿಂದ ಹಳೆಯ ಡೆಬಿಟ್, ಕ್ರೆಡಿಟ್ ಕಾರ್ಡುಗಳು ಕಾರ್ಯನಿರ್ವಹಿಸುವುದಿಲ್ಲ..

ನವದೆಹಲಿ: ನೀವು ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ಡೆಬಿಟ್, ಕ್ರೆಡಿಟ್ ಕಾರ್ಡುಗಳನ್ನು ಬಳಸುತ್ತಿದ್ದರೆ ಅವುಗಳನ್ನು ಇಂದೇ ಬದಲಾಯಿಸಿ. ಏಕೆಂದರೆ ಜನವರಿ 1, 2019 ರಿಂದ ಅಂದರೆ ನಾಳೆಯಿಂದ ಆ ಹಳೆಯ ಕಾರ್ಡುಗಳು ಕಾರ್ಯನಿರ್ವಹಿಸುವುದಿಲ್ಲ. ಆರ್‌ಬಿಐ ಈ ಹಿಂದೆಯೇ ಹೊರಡಿಸಿದ ಅಧಿಸೂಚನೆ ಪ್ರಕಾರ ಮ್ಯಾಗ್ನೆಟಿಕ್ ಸ್ಟ್ರಿಪ್ ಕಾರ್ಡ್ […]

ರಾಹುಲ್ ಗಾಂಧಿ ನಮ್ಮ ನಾಯಕ, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದರೆ ಅವರೇ ಪ್ರಧಾನಿ :ಶಶಿ ತರೂರ್

ನವದೆಹಲಿ :ಉತ್ತಮ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ಸಾಮಾರ್ಥ್ಯ ರಾಹುಲ್ ಗಾಂಧಿಗೆ ಇದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. 2019ರ ಲೋಕಸಭೆ ಚುನಾವಣೆಯ ನಂತರವೇ ಕಾಂಗ್ರೆಸ್ ಮಿತ್ರ ಪಕ್ಷಗಳೊಂದಿಗೆ ಚರ್ಚಿಸಿ ಒಮ್ಮತದಿಂದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. […]

ಕೇರಳ ಲವ್ ಜಿಹಾದ್ ಪ್ರಕರಣ : ಹಾದಿಯಾ ತಂದೆ ಅಶೋಕನ್ ಬಿಜೆಪಿಗೆ ಸೇರ್ಪಡೆ

ಕೊಚ್ಚಿ: ಕೇರಳ ಲವ್ ಜಿಹಾದ್ ಪ್ರಕರಣದ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಯುವತಿ ಹಾದಿಯಾ ತಂದೆ ಅಶೋಕನ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಶಬರಿಮಲೆಯಲ್ಲಿ ಕೇರಳ ಬಿಜೆಪಿ ಮುಖಂಡ ಜಿ.ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಅಶೋಕನ್ ಸೇರಿದಂತೆ 50 […]

ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಪರ್ಕಗಳಿಗೆ ಇನ್ನು ಮುಂದೆ ಆಧಾರ್ ಕಡ್ಡಾಯವಲ್ಲ..

ನವದೆಹಲಿ: ಆಧಾರ್ ಕಡ್ಡಾಯ ಕುರಿತಂತೆ ಇದ್ದ ನಾನಾ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು ಇನ್ಮುಂದೆ ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಪರ್ಕಗಳಿಗೆ ಆಧಾರ್ ಕಡ್ಡಾಯವಲ್ಲ. ಆಧಾರ್ ಕುರಿತಂತೆ ಈಗ ಇರುವ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರೊಂದಿಗೆ ಇನ್ಮುಂದೆ […]

ಮೋದಿ ಸರ್ಕಾರವನ್ನು ಸೋಲಿಸುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗೆ ಇದೆ; ಕಾಂಗ್ರೆಸ್​ ರಾಹುಲ್​​ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು: ಎಂಕೆ ಸ್ಟಾಲಿನ್

ಚೆನ್ನೈ:  2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗೆ ಇದೆ.. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್​ ಪ್ರಸ್ತಾಪ ಮಾಡಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ನಾಯಕ ಕರುಣಾನಿಧಿ […]

ಆನ್​​ಲೈನ್​​​ನಲ್ಲಿ​​ ಔಷಧಿ ಮಾರಾಟ ನಿಷೇಧ..

ನವದೆಹಲಿ: ಔಷಧಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವುದನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ಆದೇಶಿಸಿದ್ದು, ತಕ್ಷಣದಿಂದಲೇ ಇದನ್ನು ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆನ್​​ಲೈನ್​​ ಮೂಲಕ ಔಷಧಿ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಬೇಕು […]