Congress ಗ್ಯಾರಂಟಿ : ಜೂ. 11ರಿಂದ ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ – Vishwanews24

Featured, ರಾಜ್ಯ ನ್ಯೂಸ್

Congress ಗ್ಯಾರಂಟಿ : ಜೂ. 11ರಿಂದ ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ..

ಶಕ್ತಿ ಗ್ಯಾರಂಟಿ ಯೋಜನೆ ಜಾರಿ : ಸಮಾಜದಲ್ಲಿ ಶೇ.50ರಷ್ಟು ಮಹಿಳೆಯರು ಇದ್ದಾರೆ. ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ನಾವು ಅದನ್ನು ಜೂನ್ 11ರಿಂದ ಲಾಂಚ್ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕರ್ನಾಟಕ ರಾಜ್ಯದ ಒಳಗೆ ಸೀಮಿತವಾಗಿರುವಂತದ್ದು. ಇಲ್ಲಿಂದ ಬೆಂಗಳೂರು, ಬೀದರ್, ಕಾರವಾರ, ಮಂಗಳೂರು, ರಾಯಚೂರಿಗಾದರೂ ಹೋಗಬಹುದು. ಎಲ್ಲಿಗೆ ಸಾರಿಗೆ ಬಸ್ ಗಳಲ್ಲಿ ತೆರಳಿದರೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದರು.

ಯಾವುದು ಎಸಿ ಬಸ್ ಗಳಿದ್ದಾವೆ ಅವುಗಳನ್ನು ಬಿಟ್ಟು, ರಾಜಹಂಸ ಇರಬಹುದು, ಬೇರೆ ಬಸ್ ಇರಬಹುದು ಆ ಎಲ್ಲಾ ಬಸ್ ಗಳಲ್ಲಿ ಫ್ರೀಯಾಗಿ ಪ್ರಯಾಣ ಮಾಡಬಹುದು. ಆದರೇ ಬೆಂಗಳೂರಿನಿಂದ ತಿರುಪತಿಗೆ, ಹೈದರಾಬಾದ್ ಗೆ ಹೋಗುತ್ತೇವೆ ಎಂದರೆ ಇಲ್ಲ. ರಾಜ್ಯದ ಒಳಗೆ ಮತ್ತು ಕರ್ನಾಟಕವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಎಸಿ ಮತ್ತು ನಾನ್ ಎಸಿ ಸ್ಲೀಪರ್ ಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಿದರು.

Congress ಗ್ಯಾರಂಟಿ : ಜು.1ರಿಂದ ಬಿಪಿಎಲ್, ಎಪಿಎಲ್ ಕಾರ್ಡ್ ನ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ – Vishwanews24

ಎಸಿ ಮತ್ತು ಲಕ್ಸೂರಿ ಬಸ್ ಹೊರತುಪಡಿಸಿ ಮಾಡಿದರೆ ಶೇ.94ರಷ್ಟು ಕವರ್ ಆಗಲಿದೆ. ಇವತ್ತು ಜಾರಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಜೂನ್ 11ನೇ ತಾರೀಕು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ. ಜೂನ್ 11ರಿಂದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಬಿಎಂಟಿಸಿ, ಕೆಎಸ್‌ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದರು.

Leave a Reply