Delhi Election Results : 46 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ; ಖಾತೆ ತೆರೆಯದ ಕಾಂಗ್ರೆಸ್ – vishwanews24
Delhi Election Results : 46 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ; ಖಾತೆ ತೆರೆಯದ ಕಾಂಗ್ರೆಸ್
ನವದೆಹಲಿ: ಬಿಜೆಪಿ-ಎಎಪಿ ನಡುವಿನ ಪೈಪೋಟಿ ಚುನಾವಣಾ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿಸುತ್ತಲೇ ಇದೆ. ಅದ್ರೆ ಉಚಿತ ಗ್ಯಾರಂಟಿ ಘೋಷಿಸಿ ಸೀಮಿತ ಹೋರಾಟ ನಡೆಸಿದ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿಯೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇದು ಕೇಂದ್ರದ ನಾಯಕರಿಗೂ ಮುಖಭಂಗತರಿಸಿದೆ.
ಆರಂಭದಿಂದಲೂ ಬಿಜೆಪಿ-ಆಪ್ ನಡುವೆ ಪೈಪೋಟಿ ಮುಂದುವರಿದಿದೆ. 11:30 ಗಂಟೆ ವೇಳೆಗೆ ಬಿಜೆಪಿ 44 ಸ್ಥಾನಗಳಲ್ಲಿ ಹಾಗೂ ಆಪ್ 26 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈಗಾಗಲೇ ಮ್ಯಾಜಿಕ್ ನಂಬರ್ ತಲುಪಿರುವ ಬಿಜೆಪಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದೆ.
