#EducationInTulu ಅಭಿಯಾನ : ತುಳುವಿನಲ್ಲಿ ಟ್ವಿಟ್ ಮಾಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ ನಟ ಜಗ್ಗೇಶ್ -Vishwanews24
ಮಂಗಳೂರು: ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು, ತುಳು ಭಾಷೆಯನ್ನು ಕೂಡ ‘ನೂತನ ಶಿಕ್ಷಣ ನೀತಿ-2020’ರಡಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು ಜೈ ತುಳುನಾಡು ಸಂಘಟನೆ ಆಗಸ್ಟ್ 16ರಂದು EducationInTulu ಅನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಅಭಿಯಾನ ಆಯೋಜಿಸಿದೆ.
ಕನ್ನಡದ ನವರಸ ನಾಯಕ ಜಗ್ಗೇಶ್ ಕೂಡಾ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಟ್ವಿಟ್ ಮಾಡಿದ್ದಾರೆ. ಮಲ್ಲೆ ಇಜ್ಜಿ ಯಾನ್ ಲಾ ತುಳು ಬಾಸೆಗ ನಿನ್ನೋಟ್ಟುಗು ಬರ್ಪೆ( ನಾನು ಕೂಡಾ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ ಬರುತ್ತೇನೆ ) ಎಂದು ಜಗ್ಗೇಶ್ ತುಳುವಿನಲ್ಲಿ ಟ್ವಿಟ್ ಮಾಡಿದ್ದಾರೆ.
ಮಲ್ಲೆ ಇಜ್ಜಿ ಯಾನ್ ಲಾ ತುಳು ಬಾಸೆಗ ನಿನ್ನೋಟ್ಟುಗು ಬರ್ಪೆ
ಶುಭದಿನ… https://t.co/2BB6lcZrVH— ನವರಸನಾಯಕ ಜಗ್ಗೇಶ್ (@Jaggesh2) August 16, 2020
