ಕಾಪುವಿನಲ್ಲಿ ಸೊರಕೆಯೆಂಬ ಅಶ್ವಮೇಧ ಯಾಗದ ಕುದುರೆ ಪಳಗಿಸುವ ಬಿಜೆಪಿಯ ನಾಯಕ ಯಾರು…?? ಓದಿ ಈ ವರದಿ—ಉತ್ತರ ತಿಳಿಸಿ..!!

Featured, ರಾಜ್ಯ ನ್ಯೂಸ್

ಕಾಪುವಿನಲ್ಲಿ ಸೊರಕೆಯೆಂಬ ಅಶ್ವಮೇಧ ಯಾಗದ ಕುದುರೆ ಪಳಗಿಸುವ ಬಿಜೆಪಿಯ ನಾಯಕ

ಯಾರು…??

ಪೊಲಿಟಿಕಲ್ ಬುಲೆಟಿನ್

ವಿನಯ್ ಕುಮಾರ್ ಸೊರಕೆ ಸದ್ಯ ಕಾಪುವಿನ ಅಭಿವೃದ್ಧಿಯ ರುವಾರಿ ಕಂಡು ಕೇಳರಿಯದಷ್ಟು ಬೆಳವಣಿಗೆಯಾದ ವಿಧಾನಸಭಾ ಕ್ಷೇತ್ರ ದೂರಾಲೋಚನೆಯ ನಾಯಕ ಎಂದು ಜನ ಮಾತಾಡಿಕೊಳ್ಳುವ ಬಗೆ ಇವರೇ ಈ ಬಾರಿ ಕಾಪುವಿಗೆ ಕಾಂಗ್ರೆಸ್ ಅಭ್ಯರ್ಥಿ.ಜನರ ನಾಡಿಮಿಡಿತ ಅರ್ಥಮಾಡಿಕೊಂಡು ಕೆಲಸಮಾಡಿಕೊಟ್ಟ ನಾಯಕ ಹಿಂದುತ್ವದ ಅಲೆಯಲ್ಲಿ ಕೊಚ್ಚಿ ಹೋದ ಸೊರಕೆಯ ಕೈ ಹಿಡಿಯುವರು ಎಂಬ ನಂಬಿಕೆಯಿAದ ಮತ್ತೆ ಕಾಪುವಿನಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ.

ಸಿಂಪಲ್ ಆ್ಯಂಡ್ ಎನರ್ಜೆಟಿಕ್ ಪರ್ಸನಲಿಟಿಯ ಲೀಡರ್ ವಿನಯ್ ಕುಮಾರ್ ಸೊರಕೆ ಕ್ಷೇತ್ರಾದ್ಯಂತ ಟೊಂಕ ಕಟ್ಟಿ ತಿರುಗಿ ಪಕ್ಷ ಕಟ್ಟಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಲು ಪಣ ತೊಟ್ಟಿರುವ ಇವರಿಗೆ ಬಿಜೆಪಿಯಲ್ಲಿ ಸರಿಸಾಟಿ ನಾಯಕನ್ಯಾರೆಂಬುದು ಸದ್ಯದ ಪ್ರಶ್ನೆ.

ಕಾಪುವಿನ ಸರ್ವತೋಮುಖ ಅಭಿವೃದ್ಧಿಗೆ ಆ ಕಾಲದ ಮಟ್ಟಿಗೆ ಶಾಸಕ ವಸಂತ ವಿ ಸಾಲಿಯಾನ್ ಬಿಟ್ಟರೆ ನಂತರದ ಸ್ಥಾನಕ್ಕೆ ವಿನಯ್ ಕುಮಾರ್ ಸೊರಕೆಯೆಂಬುದು ಜನಸಾಮಾನ್ಯರ ಅಭಿಪ್ರಾಯ ಅಂತಹ ನಾಯಕನ ಸೋಲಿಗೆ ಕಾರಣವಾಗಿದ್ದು ರಾಜ್ಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿಂದು ವಿರೋಧಿ ಅಜೆಂಡಾ ಬಿಟ್ಟರೆ ಸೊರಕೆಯ ವೈಯಕ್ತಿಕ ನೆಲೆಯಿಂದಲ್ಲ ಎಂಬುದು ಗೊತ್ತಿರುವ ವಿಚಾರ ಆದರೇ ಸೊರಕೆ ಹಿಂದೂ ವಿರೋಧಿ ಅಲ್ಲ ಎಂಬುದು ಅವರ ಅವಧಿಯಲ್ಲಿ ಜೀರ್ಣೋದ್ಧಾರಗೊಂಡ ದೇಗುಲಗಳು ಹಾಗೂ ನೀಡಿರುವ ಅನುದಾನವೆ ಸಾಕ್ಷಿ.

ಭ್ರಷ್ಟಾಚಾರದ ನೆರಳು ಇಲ್ಲದೆ ರಾಜಕೀಯ ಮಾಡಿದ ಪೈಕಿ ಸೊರಕೆಯು ಒಬ್ಬರು ಹಾಗಾಗಿ ದುಡ್ಡಿನ ವಿಚಾರದಲ್ಲಿ ಅಳೆದುತೂಗಿದರು ಕಪ್ಪು ಚುಕ್ಕೆಯಿಲ್ಲದೆ ಒರ್ವ ನಾಯಕನ ಸೋಲು ಕಾಪು ವಿಧಾನಸಭಾ ಕ್ಷೇತ್ರದ ಜನರಿಗೆ ನುಂಗಲಾರದ ತುತ್ತಾಗಿದೆ .

ಅತ್ಯಂತ ಮೃದು ಸ್ವಭಾವದ ಜನಸ್ನೇಹಿ ಸೊರಕೆ ಅಧಿಕಾರಿಗಳ ಪಾಲಿಗೆ ಮಾತ್ರ ಕಬ್ಬಿಣದ ಕಡಲೆ ಜನಸಾಮಾನ್ಯರಿಗೆ ಸ್ಪಂದಿಸದಿದ್ದ ಅಧಿಕಾರಿಗಳಿಗೆ ಟ್ರಾನ್ಸ್ಫರ್ ಕಟ್ಟಿಟ್ಟ ಬುತ್ತಿ ಆ ಪರಿಣಾಮವಾಗಿ ಸದ್ಯದ ಪರಿಸ್ಥಿತಿಯಲ್ಲಿ ಕೆಲವೊಂದು ನೆಲಹುಳದಂತಿರುವ ಅಧಿಕಾರಿಗಳು ಹಾವಿನಂತೆ ಹೆಡೆ ಎತ್ತಿರುವುದೇ ವಿನಹ ಜನಸಾಮಾನ್ಯರಿಗೆ ಉಪಕಾರ ದೃಷ್ಟಿಯಿಂದ ಅಲ್ಲಎಂಬುದು ವಾಸ್ತವಿಕ ವಿಚಾರ.

ಇಂತಹ ಘಟನೆಗಳನ್ನು ಬಿಜೆಪಿ ಹೈಜಾಕ್ ಮಾಡಿ ಅಧಿಕಾರಿಗಳ ಮೇಲೆ ದರ್ಪ ಎಂದು ಬಿಂಬಿಸಲು ಯತ್ನಿಸಿದರೂ ಕೂಡ ಕೆಲವೊಂದು ಕಡೆ ವಿಫಲತೆಯಾಗಿದೆ ಕಾರಣ ಸರಳ ಸೊರಕೆ ಅವಧಿಯಲ್ಲಿ ಬ್ಯಾಗ್ ರೆಡಿ ಇಟ್ಕೊಂಡ್ರೆ ಸೈ ಆದರೆ ಪ್ರಸ್ತುತ ಬ್ಯಾಗ್ ಕೊಟ್ರೆ ಸಾಕು ಆಲ್ ಪ್ರಾಬ್ಲಮ್ ಸ್ವಾಲ್ವ್.

ಡೆವಲಪ್ಮೆಂಟ್ ವಿಚಾರದಲ್ಲಿ ರಾಜೀ ಮಾಡಿಕೊಳ್ಳದೆ ಇರುವುದು ಕೂಡ ಒಂದು ರೀತಿಯಲ್ಲಿ ಅವರಿಗೆ ಹಿನ್ನಡೆಯಾಗಿತ್ತು ಆದರೆ ಈಗ ಸ್ವಲ್ಪ ನೋವು ತಿಂದರೂ ಕೂಡ ಮುಂದೊAದು ದಿನ ಅದು ಜನೋಪಕಾರಿಯಾಗಲಿದೆಂಬುದು ಅವರ ಆಶಯ ಉದಾಹರಣೆಗೆ ಕಾಪು ತಾಲ್ಲೂಕು, ಮಣಿಪುರ ಕುಡಿಯುವ ನೀರಿನ ಯೋಜನೆ,ಇತರೆ.
ಬಹುಕನಸಿನ ನಾಯಕನಾದ ಇವರು ರಸ್ತೆ, ನೀರು,ದಾರಿದೀಪ ,ಸಾಮಾನ್ಯ ಕಾಮಗಾರಿ ಅದನ್ನ ಹೊರತು ಪಡಿಸಿ ಕಾಪುವಿಗೆ ಬರಬೇಕಿದ್ದ ಯೋಜನೆಗಳು ಬಹುಮಹಡಿ ಕಟ್ಟಡದ ವಸತಿ ಯೋಜನೆ,ಕಾಪು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವಿಕೆ,ಹಿರಿಯಡ್ಕ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ, ಕಾಪುವಿಗೆ ಪರಿಸರಸ್ನೇಹಿ ಸಾಫ್ಟ್ವೇರ್ ಕಂಪೆನಿಗಳು,ಇದೆಲ್ಲವೂ ಕಾಪುವಿಗೆ ಬೇಕಾದರೆ ಸೊರಕೆಯಂತಹ ಶಾಸಕರು ಅಗತ್ಯ ಮತ್ತು ಅನಿವಾರ್ಯವಾಗಿದೆ.

ಎಂ.ಎಲ್.ಸಿ ಬಿಟ್ಟು ಎಂ.ಎಲ್.ಎ ಗೆ ಪಟ್ಟು

ಕಳೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಬಿಜೆಪಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೇಸ್‌ನಿAದ ವಿನಯ್ ಕುಮಾರ್ ಸೊರಕೆ ಚಾಲ್ತಿಯಲ್ಲಿದದ್ದು ಗೊತ್ತಿರುವ ವಿಚಾರ ಆದರೇ ಪರಿಷತ್ ಟಿಕೆಟ್ ನಿರಾಕರಿಸಿದ ಏಕೈಕ ವ್ಯಕ್ತಿ ಎಂದರೆ ಅದು ಸೊರಕೆ ಎಂದರೂ ತಪ್ಪಾಗಲಾರದು ಈ ಬಗ್ಗೆ ಅಂದು ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿದ್ದ ಅವರು”ಕಾಪುವಿನ ಜನತೆ ಈ ಬಾರಿ ನನ್ನನ್ನು ಸೋಲಿಸುವುದಿಲ್ಲ” ಪರಿಷತ್ತು ಚುನಾಚವಣೆಯಲ್ಲಿ ಸುಲಭವಾಗಿ ಗೆದ್ದು ಅಧಿಕಾರ ನಡೆಸುವ ವ್ಯಾಮೋಹ ಎನಗಿಲ್ಲ ಎಂದಿದ್ದರು.

ಸೊರೆಕೆಯ ಅಭಿವೃದ್ದಿದಾಯಕ ಯೋಜನೆಯಿಂದಾಗಿ ಕಾಪು ಹೊಸ ಮೆರುಗು ಪಡೆದುಕೊಂಡಿತ್ತು ಮತ್ತು ಕಮಿಷನ್ ಎಂಬ ವಾಸನೆ ಕೂಡ ಆ ಕಾಲದಲ್ಲಿ ಇಲ್ಲದ ಪರಿಣಾಮವಾಗಿ ಕಾಮಗಾರಿಗಳು ಕಳಪೆ ಗುಣಮಟ್ಟದಾಗಿರಲಿಲ್ಲ ಎಂಬುದನ್ನು ಸ್ವತಃ ಇಂಜಿನಿಯರ್‌ಗಳೆ ಹೇಳಿದ್ದನ್ನು ಕೇಳಿರಬಹುದು ಹಾಗಾಗಿ ಸೊರಕೆಯ ಮೇಲೆ ಜನಸಾಮಾನ್ಯರಿಗೆ ಪ್ರೀತಿ ಕಡಿಮೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಸದ್ಯ ಕಾಂಗ್ರೇಸ್ ಪಕ್ಷಕ್ಕೆ ಮುಳುವಾಗಿರುವುದು ಎಸ್.ಡಿ.ಪಿ.ಐ ಅಂದರೆ ಬಿಜೆಪಿಯ ಪ್ಯಾಂಪರ್ ಬೇಬಿ ಪ್ರತಿ ಚುನಾವಣೆಯಲ್ಲಿ ಕೂಡ ಬಿಜೆಪಿ ಕೆಲವೊಂದು ಭಾಗದಲ್ಲಿ ಗೆಲುವು ಸಾಧಿಸುತ್ತಿದ್ದರೆ ಸದ್ಯದ ಮಟ್ಟಿಗೆ ಅದಕ್ಕೆ ಕಾರಣ ಎಸ್.ಡಿ.ಪಿ.ಐ, ಅಲ್ಪಸಂಖ್ಯಾತರ ಮತ ವಿಭಜನೆಯಿಂದಾಗಿ ಕಾಂಗ್ರೇಸ್ ಪಾರ್ಟಿಗೆ ಮುಳುವಾಗಿದೆ ಉದಾಹರಣೆಗೆ ಕಾಪುವಿನಲ್ಲಿ ನಡೆದ ಪುರಸಭಾ ಚುನಾವಣೆ, ವಿನಯ್ ಕುಮಾರ್ ಸೊರಕೆಯ ವರ್ಚಸ್ಸಿಗೆ ಕೋಸ್ಟಲ್ ಬೆಲ್ಟ್ ಬಿಜೆಪಿಯ ಮತವೆಲ್ಲವೂ ಕೂಡ ಕಾಂಗ್ರೇಸ್ ಪಾಳಾಯಿತು,ಕಾಂಗ್ರೇಸ್ ಬೆಲ್ಟಿನ ವೋಟ್ ಬಿಜೆಪಿಯ ದತ್ತು ಮಗುವಿನ ಪಾಲಾಯಿತು ಹಾಗಾಗಿ ಮತ್ತೆ ಪುರಸಭೆಯಲ್ಲಿ ಬಿಜೆಪಿ ಗದ್ದುಗೆ ಗಟ್ಟಿ ಮಾಡಿಕೊಂಡಿತು, ಒಂದು ಲೆಕ್ಕಾಚಾರದ ಪ್ರಕಾರ ಕಾಂಗ್ರೇಸ್ ಗೆದ್ದರೆ ಇನ್ನೊಂದೆಡೆ ಅಲ್ಪಸಂಖ್ಯಾತರನ್ನು ನಂಬಿದ್ದ ಮತ್ತು ಪಕ್ಷದೊಳಗಿನ ಹಿಡನ್ ಪೊಲಿಟಿಷಿಯನ್ಸ್ ರ ನಾಟಕದಿಂದಾಗಿ ಎಸ್.ಡಿ.ಪಿ.ಐ ಕಾಂಗ್ರೆಸ್ ನ ಬೆಲ್ಟ್ ಕಿತ್ತು ತನ್ನ ಪ್ಯಾಂಟ್ ಗಟ್ಟಿ ಮಾಡಿಕೊಂಡಿತು.

ಸದ್ಯದವರೆಗೆ ಕ್ಷೇತ್ರದಾದ್ಯಂತ ವಿನಯ್ ಕುಮಾರ್ ಸೊರಕೆಯ ಪರವಾದ ವಾತಾವರಣ ಉತ್ತಮವಾಗಿದೆ ಬೆಂಗಳೂರಿನಿAದ ಸರ್ವೆ ತಂಡ ಕೂಡ ಇವರ ಪರವಾದ ವೈಯಕ್ತಿಕ ವರ್ಚಸ್ಸು ಕಂಡು ನಿಬ್ಬೆರಗಾಗಿದ್ದರು ಹಾಗಾಗಿ ಮುಂದಿನ ಚುನಾವಣೆ ಬೆಜೆಪಿ ಚೂರು ಎಚ್ಚರ ತಪ್ಪಿದರೂ ಕೂಡ ಸೊರಕೆ ಗೆಲ್ಲುವುದು ಖಚಿತ ಹಾಗಾದರೇ ಸೊರಕೆಯನ್ನು ಪಳಗಿಸುವ ಕಾಪುವಿನಲ್ಲಿ ಬಿಜೆಪಿಗೆ ಸದ್ಯದ ನಾಯಕ ಯಾರೆಂಬುದು ಸದ್ಯದ ಪ್ರಶ್ನೆ..??

ಉತ್ತರ ಓದುಗರು ತಿಳಿಸಿ..??

Leave a Reply