ಉಡುಪಿ ಮಾಜಿ ಶಾಸಕ ರಘುಪತಿ ಭಟ್‌ಗೆ ಬಿಜೆಪಿಯಿಂದ ಎಂ ಎಲ್ ಸಿ ಸ್ಥಾನ…? vishwanews24

Featured, ಉಡುಪಿ

ಉಡುಪಿ ಮಾಜಿ ಶಾಸಕ ರಘುಪತಿ ಭಟ್‌ಗೆ ಬಿಜೆಪಿಯಿಂದ ಎಂ ಎಲ್ ಸಿ ಸ್ಥಾನ…?

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ವಿಧಾನ ಪರಿಷತ್ ನೈರುತ್ಯ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಬಲ್ಲ ಮೂಲಗಳ ಮಾಹಿತಿ ಪ್ರಕಾರ ೨೦೨೪ ರ ಸಾಲಿನಲ್ಲಿ ನಡೆಯುವ ಈ ಚುನಾವಣೆ ಬಿಜೆಪಿಗೆ ಅತ್ಯಂತ ಪ್ರಾಶಸ್ತö್ಯದ ಚುನಾವಣೆಯಾಗಿದ್ದು ಈಗಾಗಲೇ ತಯಾರಿ ಶುರು ಮಾಡಿಕೊಂಡಿದೆ.ಕಳೆದ ಬಾರಿ ಬಿಜೆಪಿ ಅಭ್ಯರ್ಥಿ  ಆಯನೂರು ಮಂಜುನಾಥ್ ಗೆಲುವು ಸಾಧಿಸಿದ್ದರು.

ರಾಜ್ಯ ಬಿಜೆಪಿಯಿಂದ ನೈರುತ್ಯ ಪದವಿಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾಗಿ ಸಿ.ಟಿ ರವಿ ನೇಮಕಗೊಂಡಿದ್ದು ಚುನಾವಣೆಯ ಪೂರ್ವಭಾವಿ ಕಾರ್ಯಗಳು ಕೂಡÀ ಭರದಿಂದ ಸಾಗುತ್ತಿದೆ.ಇನ್ನು ರಘುಪತಿ ಭಟ್ ಅವರು ಕೂಡ ಉಡುಪಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಸಭೆಗಳನ್ನು ನಡೆಸುತ್ತಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡುವ ಕುರಿತು ವಿನಂತಿಸುತ್ತಿದ್ದಾರೆ.ಬಿಜೆಪಿಯ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಈ ಬಾರಿಯ ಚುನಾವಣೆಗೆ ರಘುಪತಿ ಭಟ್ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದ್ದು ಆ ಕಾರಣದಿಂದಾಗಿ ಹೆಚ್ಚಿನ ಓಡಾಟ ನಡೆಯುತ್ತಿದೆ ಎನ್ನಲಾಗುತ್ತಿದೆ.

ಜಿಲ್ಲೆಯ ಐದು ಶಾಸಕರು ಸಾಥ್
ಇನ್ನೂ ಈ ಚುನಾವಣೆಯನ್ನು ಗೆಲ್ಲಬೇಕಾದರೆ ಸಂಪರ್ಕವೆ ಪ್ರಧಾನ ಅಸ್ತçವಾಗಿದೆ ಆದೂದರಿಂದ ಈಗಾಗಲೇ ಜಿಲ್ಲೆಯ ಬಿಜೆಪಿ ಶಾಸಕರ ಜತೆಗೂಡಿ ಅಭಿಯಾನ ಕಾರ್ಯದ ಜತೆಗೆ ನಾವೂ ಕೂಡ ರೇಸಿನಲ್ಲಿದ್ದೇವೆ ಅನ್ನುವ ಸಂದೇಶ ನೀಡುವ ಲಕ್ಷಣ ಗೋಚರಿಸುತ್ತಿದೆ ಇದಕ್ಕೆ ಉಡುಪಿ ಭಾಗದ ಶಾಸಕರು ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

 

 

Leave a Reply