Human Rights ಹೆಸರಲ್ಲಿ ಸುಲಿಗೆ: ನಕಲಿ ಕಾರ್ಯಕರ್ತ ದಿನೇಶ್ ಗಾಣಿಗನ ಮೇಲೆ ಕೇಸು ದಾಖಲು:vishwanews24

Featured, ಉಡುಪಿ

Human Rights ಹೆಸರಲ್ಲಿ ಸುಲಿಗೆ:
ನಕಲಿ ಕಾರ್ಯಕರ್ತ ದಿನೇಶ್ ಗಾಣಿಗನ ಮೇಲೆ ಕೇಸು ದಾಖಲು.

ಉಡುಪಿ: National Human Rights Committee of India ಎಂಬ ಸಂಘಟನೆಯ General Secretory of Karnataka ಎಂದು ಜನರಿಗೆ ಹೇಳಿಕೊಂಡು National Human Rights Commission of India ದ ಹೆಸರು ಹಾಗೂ ಲೋಗೋವನ್ನು ಹೊಂದಾಣಿಕೆಯಾಗುವ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡು ಅಮಾಯಕ ಜನರನ್ನು ಬೆದರಿಸುತ್ತಿದ್ದ ಕೋಟ ಪಡುಕರೆ ನಿವಾಸಿ ದಿನೇಶ್ ಗಾಣಿಗ (45 ವರ್ಷ) ಎಂಬಾತನ ಮೇಲೆ Chey ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. THE EMBLEMS AND NAMES (PREVENTION OF IMPROPER USE) ACT 1950ರಲ್ಲಿ ಕಲಂ. 3 & 5 ಮತ್ತು ಕಲಂ 170, 419 ಐಪಿಸಿ ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
National Human Rights Commission of India ಇವರ ಸೂಚನೆಯಂತೆ Miss use of name of the Commission ಎಂಬ ಒಕ್ಕಣೆಯಲ್ಲಿ Any Institution / Individual using the NHRC Logo or Writing ‘Having association with NHRC’ or words to the effect misleading the name of the Commission will render itself liable for suitable legal action by the Commission ಎಂಬುವುದಾಗಿ ಇದ್ದು, National Human Rights Commission of India ದ ಹೆಸರು ಹಾಗೂ ಲೋಗೋವನ್ನು ದುರ್ಬಳಕೆ ಮಾಡಿಕೊಂಡಿರುವುದು ನಿಮ್ಮ ಸರಹದ್ದಿನಲ್ಲಿ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಉಡುಪಿ ಜಿಲ್ಲೆಯ ಪೊಲಿಸರು ಸೂಚಿಸಿದ್ದಾರೆ.

ಈ ದಿನೇಶ ಗಾಣಿಗ ಎಂಬಾತನು ನಕಲಿ ಪತ್ರಕರ್ತನಂತೆ ತನ್ನ ವಾಹನದಲ್ಲಿ ಪ್ರೆಸ್ ಎನ್ನುವ ಬೋರ್ಡ್ ಹಾಕಿಕೊಂಡು ಸಾಋವಜನಿಕರನ್ನು ಬೆದರಿಸಿ ಸುಲಿಗೆ ನಡೆಸುತ್ತಿರುವ ಬಗ್ಗೆಯೂ ಆರೋಪ ಕೇಳಿಬಂದಿದೆ.

Leave a Reply