IMDB ರೇಟಿಂಗ್: ಅಗ್ರ 10ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು – Vishwanews24

Featured, ರಾಷ್ಟ್ರ ನ್ಯೂಸ್

IMDB ರೇಟಿಂಗ್: ಅಗ್ರ 10ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು

2022ರಲ್ಲಿ ಅತ್ಯುತ್ತಮ ರೇಟಿಂಗ್‌ ಪಡೆದ 10 ಚಿತ್ರಗಳ ಪಟ್ಟಿಯನ್ನು ಐಎಂಡಿಬಿ (ಇಂಟರ್‌ನೆಟ್‌ ಮೂವಿ ಡಾಟಾಬೇಸ್) ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಕನ್ನಡ, ತೆಲುಗಿನ ಮತ್ತು ತಮಿಳಿನ ತಲಾ ಮೂರು ಚಿತ್ರಗಳು ಸ್ಥಾನ ಪಡೆದಿದ್ದು, ಹಿಂದಿಯ ಒಂದೇ ಒಂದು ಸಿನಿಮಾ ಕಾಣಿಸಿಕೊಂಡಿದೆ.

ತೆಲುಗು ನಿರ್ದೇಶನದ ಎಸ್‌.ಎಸ್‌. ರಾಜಮೌಳಿ ಅವರ ‘ಆರ್‌ಆರ್‌ಆರ್‌’ (ರಣಂ ರೌದ್ರಂ ರುಧಿರಂ) ಸಿನಿಮಾ ಮೊದಲ ಸ್ಥಾನದಲ್ಲಿದ್ದು, ವಿವೇಕ್‌ ಅಗ್ನಿಹೋತ್ರಿ ಅವರ ಹಿಂದಿ ಸಿನಿಮಾ ‘ದಿ ಕಾಶ್ಮೀರ್‌ ಫೈಲ್ಸ್‌’ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

KGF Chapter 2 : ಕೆಜಿಎಫ್ - 2 ಬಿಡುಗಡೆಗೆ ತಡೆ ಕೋರಿ ಕೋರ್ಟ್‌ನಲ್ಲಿ ದಾವೆ ಸಲ್ಲಿಕೆ |  Petition Filed In City Civil Court Seeking To Stay Release Of Movie KGF  Chapter 2 - Kannada Oneindia

 

ಐಎಂಡಿಬಿ ಬಿಡುಗಡೆ ಮಾಡಿರುವ 2022ರ ಅಗ್ರ ಹತ್ತು ಜನಪ್ರಿಯ ಸಿನಿಮಾಗಳು
1. ಆರ್‌ಆರ್‌ಆರ್‌ – ತೆಲುಗು (ಟಾಲಿವುಡ್‌)
2. ದಿ ಕಾಶ್ಮೀರ್‌ ಫೈಲ್ಸ್ – ಹಿಂದಿ (ಬಾಲಿವುಡ್‌)
3. ಕೆಜಿಎಫ್‌: ಚಾಪ್ಟರ್‌ 2 – ಕನ್ನಡ (ಸ್ಯಾಂಡಲ್‌ವುಡ್‌)
4. ವಿಕ್ರಂ – ತಮಿಳು (ಕಾಲಿವುಡ್‌)
5. ಕಾಂತಾರ – ಕನ್ನಡ (ಸ್ಯಾಂಡಲ್‌ವುಡ್‌)

Kantara Box Office Collection: 2ನೇ ದಿನಕ್ಕೆ ಕಾಂತಾರ ಕಲೆಕ್ಷನ್ 3 ಪಟ್ಟು ಹೆಚ್ಚಳ!  ಗಳಿಸಿದ್ದೆಷ್ಟು?

6. ರಾಕೆಟ್ರಿ: ದಿ ನಂಬಿ ಎಫೆಕ್ಟ್‌ – ತಮಿಳು (ಕಾಲಿವುಡ್‌)
7. ಮೇಜರ್‌ (ಬಯೋಪಿಕ್‌) – ತೆಲುಗು (ಟಾಲಿವುಡ್‌)
8. ಸೀತಾ ರಾಮಮ್‌ – ತೆಲುಗು (ಟಾಲಿವುಡ್‌)
9. ಪೊನ್ನೀಯನ್‌ ಸೆಲ್ವನ್‌: ಭಾಗ 1 – ತಮಿಳು (ಕಾಲಿವುಡ್‌)
10. 777 ಚಾರ್ಲಿ – ಕನ್ನಡ (ಸ್ಯಾಂಡಲ್‌ವುಡ್‌)

Rakshit Shetty's 777 Charlie to release on OTT on this date | Entertainment  News,The Indian Express

Leave a Reply