Featured

Karnataka Budget : ‘ಕಿಸಾನ್ ಕ್ರೆಡಿಟ್ ಕಾರ್ಡ್’ ಹೊಂದಿರುವ ರೈತರಿಗೆ  ಹೆಚ್ಚುವರಿಯಾಗಿ ’10 ಸಾವಿರ ರೂ ಸಹಾಯಧನ’ ನೀಡಿಕೆ – Vishwanews24

Karnataka Budget : ‘ಕಿಸಾನ್ ಕ್ರೆಡಿಟ್ ಕಾರ್ಡ್’ ಹೊಂದಿರುವ ರೈತರಿಗೆ  ಹೆಚ್ಚುವರಿಯಾಗಿ ’10 ಸಾವಿರ ರೂ ಸಹಾಯಧನ’ ನೀಡಿಕೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸುತ್ತಿರುವಂತ ಬಜೆಟ್ ನಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ರೈತರಿಗೆ ನೀಡುತ್ತಿರುವಂತ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುತ್ತಿರೋದಾಗಿ ಘೋಷಿಸಿದ್ದಾರೆ.

ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಗಳಿಗೆ ಹೆಚ್ಚಿಸಲಾಗುವುದು. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗಲಿದೆ ಎಂದರು.

ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಿದಂತೆ ಸಾಲ ಹೆಚ್ಚಳದಿಂದ ರೈತರಿಗೆ ಆಗಲಿದೆ. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ತರಿಗೆ 25,000 ಕೋಟಿ ರೂಗಳಷ್ಟು ಸಾಲ ವಿತರಿಸಲಾಗುವುದು ಎಂದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ ಗಳ ಹೆಚ್ಚುವರಿ ಸಹಾಯ ಧನ ನೀಡಲು ನಿರ್ಧರಿಸಿದ್ದೇವೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ ಹಾಗೂ ನಬಾರ್ಡ್ ನ 7,500 ರೂ ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದರು.

Vishwa News 24

Recent Posts

ಜುಲೈ 11ರಂದು ಕಾಪು ತಾಲೂಕು ಕೃಷಿಕ ಸಮಾಜದ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಅವಕಾಶ – vishwanews24

ಜುಲೈ 11ರಂದು ಕಾಪು ತಾಲೂಕು ಕೃಷಿಕ ಸಮಾಜದ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಅವಕಾಶ ಉಡುಪಿ : ಕರ್ನಾಟಕ ಪ್ರದೇಶ ಕೃಷಿಕ…

5 minutes ago

ಧರ್ಮಸ್ಥಳ ಪ್ರಕರಣದ ಎಸ್ ಐ ಟಿ ವರದಿ ಬಹಿರಂಗ ಮಾಡಲಿ : ಶಾಸಕ ವಿ.ಸುನಿಲ್ ಕುಮಾರ್ ಆಗ್ರಹ – vishwanews24

ಧರ್ಮಸ್ಥಳ ಪ್ರಕರಣದ ಎಸ್‍ಐಟಿ ವರದಿ ಬಹಿರಂಗ ಮಾಡಲಿ : ಶಾಸಕ ವಿ.ಸುನಿಲ್ ಕುಮಾರ್ ಆಗ್ರಹ ಬೆಂಗಳೂರು : ಧರ್ಮಸ್ಥಳ ಪ್ರಕರಣದ…

17 minutes ago

ಡಿವೈಡರ್‌ಗೆ ಬೈಕ್ ಡಿಕ್ಕಿ : ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು – vishwanews24

ಡಿವೈಡರ್‌ಗೆ ಬೈಕ್ ಡಿಕ್ಕಿ : ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು ಬೆಂಗಳೂರು: ಡಿವೈಡರ್‌ಗೆ  ಡಿಕ್ಕಿ ಹೊಡೆದ ಪರಿಣಾಮ…

24 minutes ago

ಉಡುಪಿ: ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ : ಪ್ರಮೋದ್ ಮಧ್ವರಾಜ್ – vishwanews24

ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ.. ಅಧಿಕಾರ ಸಿಕ್ಕರೆ ಜನರ ಸೇವೆಗೆ ಬಳಸುತ್ತೇನೆ, ಸಿಗದಿದ್ದರೂ ಜನರ ಸೇವೆಯನ್ನು…

35 minutes ago

ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್‌ ಮಾತ್ರ: ಡೀಸೆಲ್‌ ಮಾರಾಟ ಮಿತಿಗೊಳಿಸಿದ ಕೇಂದ್ರ – vishwanews24

ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್‌ ಮಾತ್ರ: ಡೀಸೆಲ್‌ ಮಾರಾಟ ಮಿತಿಗೊಳಿಸಿದ ಕೇಂದ್ರ ನವದೆಹಲಿ: ಡೀಸೆಲ್‌ ಮಾರಾಟಕ್ಕೆ ಕೇಂದ್ರ ಸರ್ಕಾರ…

42 minutes ago

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ – vishwanews24

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ)…

46 minutes ago