Karnataka Budget 2022: ಪಡಿತರ ಚೀಟಿದಾರ’ರಿಗೆ   5 ಕೆಜಿ ಅಕ್ಕಿ ಜೊತೆಗೆ ಒಂದು ಕೆಜಿ ರಾಗಿ ಅಥವಾ ಜೋಳ ವಿತರಣೆ – Vishwanews24

Featured, ರಾಜ್ಯ ನ್ಯೂಸ್

Karnataka Budget 2022: ಪಡಿತರ ಚೀಟಿದಾರ’ರಿಗೆ   5 ಕೆಜಿ ಅಕ್ಕಿ ಜೊತೆಗೆ ಒಂದು ಕೆಜಿ ರಾಗಿ, ಜೋಳ ವಿತರಣೆ

ಬೆಂಗಳೂರು: ಸಿರಿಧಾನ್ಯಗಳ ಬಳಕೆಯನ್ನು ಉತ್ತೇಚಿಸುವ ನಿಟ್ಟಿನಲ್ಲಿ, 2022-23ನೇ ಸಾಲಿನಲ್ಲಿ ಪಡಿತರ ಚೀಟಿದಾರರಿಗೆ ಐದು ಕೆಜಿ ಅಕ್ಕಿಯ ಜೊತೆಗೆ, ಒಂದು ಕೆಜಿ ರಾಗಿ ಅಥವಾ ಜೋಳವನ್ನು ವಿತರಿಸಲಾಗುತ್ತದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಆಹಾರ ಪದ್ದತಿಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು 2022-23ನೇ ಸಾಲಿನಲ್ಲಿ ಸುಮಾರು 4.34 ಕೋಟಿ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿಯನ್ನು ಒದಗಿಸಲಾಗುತ್ತಿದೆ ಎಂದರು.

ಈ ವರ್ಷದಿಂದ ಪಡಿತರ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 1,400 ಕೋಟಿಗಳ ವೆಚ್ಚದಲ್ಲಿ ಒಂದು ಕೆಜಿ ರಾಗಿ ಅಥವಾ ಜೋಳವನ್ನು ವಿತರಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

Karnataka Budget 2022: ರಾಜ್ಯ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನ 32,000ರೂ.ವರೆಗೆ ಹೆಚ್ಚಳ – Vishwanews24

Leave a Reply