Karnataka Budget 2022 : ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ – Vishwanews24

Featured, ರಾಜ್ಯ ನ್ಯೂಸ್

Karnataka Budget 2022 : ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

ಬೆಂಗಳೂರು:ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ರಾಜ್ಯ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳನ್ನು ಪ್ರಸ್ತಕ ಸಾಲಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸುವುದು. ಈ ಯೋಜೆನೆಗೆ 2ನೇ ಹಂತದ 260 ಕಿ.ಮೀ ಉದ್ದ ಗುರತ್ವ ಕಾಲುವೆ ಟಿ.ಜಿ ಹಳ್ಳಿ- ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಟಿ.ಜಿ ಗೌರೀಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು ಪ್ರಸ್ತಕ ಸಾಲಿನಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಲು ಕ್ರಮ ಜರುಗಿಸಲು ಹಾಗೂ ಯೋಜೆನಗೆ ಉಳಿಗೆ ಕಾಮಗಾರಿಗಳನ್ನು ಹಂತ, ಹಂತವಾಗಿ ಕಾರ್ಯಗತಗೊಳಿಸಲು ಕ್ರಮವಹಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ 3,000 ಕೋಟಿ ರೂಪಾಯಿ ಅನುದಾನ ಒದಗಿಲಸಾಗುವುದು.

ನೀರಾವರಿಗೆ ಆದ್ಯತೆ:
* ಕೃಷ್ಣಾ ಮೇಲ್ದಂಡೆ ಯೋಜೆನೆ ಹಂತ 3ಕ್ಕೆ- 5000 ಕೋಟಿ ರೂ.
* ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ- 1000 ಕೋಟಿ ರೂ
* ಭದ್ರಾ ಮೇಲ್ದಂಡೆ ಯೋಜನೆ- 3000 ಕೋಟಿ ರೂ ಅನುದಾನ
* ಮೇಕೆದಾಟು ಯೋಜನೆಗೆ 1,000 ಕೋಟಿ ಅನುದಾನ
* ಎತ್ತನಹೊಳೆ ಯೋಜನೆ- 3,000 ಕೋಟಿ ರೂ ಅನುದಾನ

Karnataka Budget 2022 : ರಾಜ್ಯದ ಹಾಲು ಉತ್ಪಾದಕರಿಗೆ ಸಾಲಸೌಲಭ್ಯಕ್ಕಾಗಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ – Vishwanews24

Leave a Reply