Karnataka Budget-2022 : ರಾಜ್ಯದ ಕುರಿ, ಮೇಕೆ ಸಾಕಾಣಿಕೆದಾರಿಗೆ ಪರಿಹಾರ ಧನ 2,500 ರಿಂದ 3,500ಕ್ಕೆ ಹೆಚ್ಚಳ, ವಿಮಾ ಸೌಲಭ್ಯ – Vishwanews24
Karnataka Budget-2022 : ರಾಜ್ಯದ ಕುರಿ, ಮೇಕೆ ಸಾಕಾಣಿಕೆದಾರಿಗೆ ಪರಿಹಾರ ಧನ 2,500 ರಿಂದ 3,500ಕ್ಕೆ ಹೆಚ್ಚಳ, ವಿಮಾ ಸೌಲಭ್ಯ – Vishwanews24
ಬೆಂಗಳೂರು: ರಾಜ್ಯದ ಕುರಿ, ಮೇಕೆ ಸಾಕಾಣಿಕೆದಾರರು, ವಲಸೆ ಕುರಿಗಾರರಿಗೆ ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಕುರಿ, ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2500 ರಿಂದ 3500ಕ್ಕೆ ಹೆಚ್ಚಿಸಲಾಗಿದೆ. ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದ್ರೇ 5 ಲಕ್ಷ ವಿಮಾ ಸೌಲಭ್ಯ ನೀಡಲಾಗುತ್ತದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ 3-6 ತಿಂಗಳ ವಯಸ್ಸಿನ ಕುರಿ, ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2,500 ರೂಗಳಿಂದ 3,500 ರೂ ಗಳಿಗೆ ಹೆಚ್ಚಿಸಲಾಗುವುದು ಎಂದರು.
ಕುರಿ, ಮೇಕೆ ಸಾಕಾಣಿಕೆದಾರರು, ವಲಸೆಗಾರರು, ಆಕಸ್ಮಿಕ ಮರಣ ಹೊಂದಿದಲ್ಲಿ, ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು, ಕುರಿಗಾಯಿಗಳಿಗೆ ಐದು ಲಕ್ಷ ರೂ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದರು.
ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ, ಕುರಿ ದೊಡ್ಡಿ ನಿರ್ಮಿಸಲು ಐದು ಲಕ್ಷ ಸಹಾಯ ಧಾನ ನೀಡಲಾಗುವುದು ಎಂದು ತಿಳಿಸಿದರು.
Karnataka Budget 2022 : ಬಿಸಿಯೂಟ ತಯಾರಕರು, ಸಹಾಯಕಿಯರಿಗೆ ಗೌರವಧನ 1 ಸಾವಿರ ರೂ. ಏರಿಕೆ – Vishwanews24
