Karnataka Budget 2023 : ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನಕ್ಕೆ ‘ಮತ್ಸ್ಯಸಿರಿ’ ಯೋಜನೆ ಘೋಷಣೆ – Vishwanews24
Karnataka Budget 2023 : ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನಕ್ಕೆ ‘ಮತ್ಸ್ಯಸಿರಿ’ ಯೋಜನೆ ಘೋಷಣೆ
ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಗಾತ್ರ 3 ಲಕ್ಷ 7 ಸಾವಿರ ಕೋಟಿ ರೂ.ಇದ್ದು, ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್ ಮಂಡಿಸಲಾಗುತ್ತಿದೆ. ಈ ಬಜೆಟ್ ಮುಂದಿನ 25 ವರ್ಷ ದೂರದೃಷ್ಟಿ ಹೊಂದಿದೆ. ಈ ಬಜೆಟ್ ಉತ್ತಮ ಬದುಕಿನ ಭರವಸೆಯಾಗಿದೆ ಎಂದು ಹೇಳಿದ್ದಾರೆ.
ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಪರಿವರ್ತಿಸಲು 40 ಕೋಟಿ ರೂ. ಮೀಸಲಿಡಲಾಗುವುದು. ಇದು ಪರಿವರ್ತನೆಯಾಗುವ ವರೆಗೂ ಸೀಮೆಎಣ್ಣೆ ಸಹಾಯಧನ ಮುಂದುವರಿಸಲಾಗುವುದು.
Karnataka Budget 2023 : ನೇಕಾರ ಸಮ್ಮಾನ್ ಯೋಜನೆಯಡಿ ಸಹಾಯಧನ ಮೊತ್ತ 5 ಸಾವಿರ ರೂ.ಗೆ ಹೆಚ್ಚಳ – Vishwanews24
ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಎಂಬ ಯೋಜನೆ ಆರಂಭಿಸಲಾಗಿದೆ.
ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜತೆ ಸಮನ್ವಯಗೊಳಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮೀನುಗಾರಿಕೆ ಉತ್ತೇಜನಕ್ಕೆ ಕಾರವಾರದ ಬಳಿ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಆರ್ಟಿಫಿಶೀಯಲ್ ರಿಫ್ ಸ್ಥಾಪನೆ (ಕೃತಕ ಬಂಡೆಗಳ ಮೂಲಕ ) ಮಾಡಲಾಗುವುದು ಎಂದು ಹೇಳಿದ್ದಾರೆ.
ದೋಣಿಗಳಿಗೆ ಮೋಟಾರ್ ಇಂಜಿನ್ ಅಳವಡಿಕೆ. ನೇಕಾರರು, ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ, ಇಸ್ರೋ ಅಭಿವೃದ್ದಿಪಡಿಸಿದ ಜಿಪಿಎಸ್ ದೋಣಿಗಳಿಗೆ ಅಳವಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
