PFI ನಿಷೇಧ – ಭಾರತದ ಸುರಕ್ಷತೆ ದೃಷ್ಠಿಯಿಂದ ಇದು ಅವಶ್ಯಕತೆ ಇತ್ತು : ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಪ್ರಮೋದ್ ಮುತಾಲಿಕ್ – Vishwanews24

Featured, ರಾಜ್ಯ ನ್ಯೂಸ್

PFI ನಿಷೇಧ – ಭಾರತದ ಸುರಕ್ಷತೆ ದೃಷ್ಠಿಯಿಂದ ಇದು ಅವಶ್ಯಕತೆ ಇತ್ತು : ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಪ್ರಮೋದ್ ಮುತಾಲಿಕ್

ಧಾರವಾಡ: ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಭಾರತದ ಸುರಕ್ಷತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿದ್ದು ಆನಂದದಾಯಕ ವಿಚಾರ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಸಂತಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಭಾರತದ ಸುರಕ್ಷತೆ ದೃಷ್ಠಿಯಿಂದ ಇದು ಅವಶ್ಯಕತೆ ಇತ್ತು. ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 15 ವರ್ಷಗಳ ನಮ್ಮ ಬೇಡಿಕೆ ಈಡೇರಿದೆ. ಪಿಎಫ್‌ಐನಂತಹ ದೇಶದ್ರೋಹಿ, ಸಮಾಜ ಕಂಟಕ, ಆತಂಕಕಾರಿಯಾದ ಈ ಸಂಘಟನೆಯನ್ನು ಮೊದಲೇ ಬ್ಯಾನ್ ಮಾಡಬೇಕಿತ್ತು. ತಡವಾಗಿ ಬ್ಯಾನ್ ಮಾಡಿದರೂ, ಈ ದೇಶಕ್ಕಾಗುವ ಗಂಡಾಂತರವನ್ನು ತಡೆಯುವ ಕೆಲಸ ಮಾಡಿದಂತಾಗಿದೆ ಎಂದರು.

PFI ನಿಷೇಧ – ಸಂವಿಧಾನಕ್ಕೆ ವಿರುದ್ಧವಾಗಿರುವ ಎಲ್ಲಾ ಸಂಘಟನೆಗಳ ವಿರುದ್ಧ ಶ್ರೀಘ್ರದಲ್ಲೇ ಸಮಾನ ಕ್ರಮ ಕೈಗೊಳ್ಳಲಿ : ಯು.ಟಿ.ಖಾದರ್ – Vishwanews24

ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕು. ತಮ್ಮ ಸಮಾಜದ ಯುವಕರು ಯಾವ ದಿಕ್ಕಿನತ್ತ ಹೋಗುತ್ತಿದ್ದಾರೆ ಎಂಬುದನ್ನು ಮುಸ್ಲಿಂ ಸಮಾಜದ ಹಿರಿಯರು ತಿಳಿದುಕೊಳ್ಳಬೇಕು. ದೇಶದ್ರೋಹಿ ಚಟುವಟಿಕೆ ಮಾಡಿದಾಗ ಸರ್ಕಾರ, ಪೊಲೀಸರ ಗಮನಕ್ಕೆ ತರಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಈ ದೇಶಕ್ಕೆ ಇವರು ಬದ್ಧರಾಗಿರಬೇಕು. ದೇಶದ್ರೋಹ ಮಾಡುವಂತ ವಿಕೃತ ಮನಸ್ಸುಳ್ಳ ಯುವಕರನ್ನು ತಡೆಯಬೇಕು. ಇದನ್ನು ಮುಸ್ಲಿಂ ಸಮಾಜದ ಮುಖಂಡರೇ ಮಾಡಬೇಕು. ಮುಸ್ಲಿಂರು ಮಾನಸಿಕತೆ ಬದಲಾವಣೆ ಮಾಡುವ ಪ್ರಕ್ರಿಯೆ ಮದರಸಾಗಳಲ್ಲೂ ಆಗಬೇಕು ಎಂದು ಹೇಳಿದ್ದಾರೆ.

PFI ನಿಷೇಧ – ಇದು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ; ವಾಕ್‌ ಸ್ವಾತಂತ್ರ್ಯ ಪ್ರತಿಭಟನೆ ಮತ್ತು ಸಂಘಟನೆಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ : SDPI – Vishwanews24

Leave a Reply