PM Kisan Yojana : ಮೇ.22 ರೊಳಗಾಗಿ `ಇ-ಕೆವೈಸಿ’ ಕಡ್ಡಾಯ ; ಇ-ಕೆವಾಯ್‍ಸಿ ಮಾಡಲು ಹೀಗೆ ಮಾಡಿ – Vishwanews24
PM Kisan Yojana : ಮೇ.22 ರೊಳಗಾಗಿ `ಇ-ಕೆವೈಸಿ’ ಕಡ್ಡಾಯ ; ಇ-ಕೆವಾಯ್‍ಸಿ ಮಾಡಲು ಹೀಗೆ ಮಾಡಿ
ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವನ್ನು ಮೇ 22ರವರೆಗೆ ವಿಸ್ತರಿಸಲಾಗಿದೆ. ಮೇ 22, 2022 ರೊಳಗಾಗಿ ಇ-ಕೆವಾಯ್‍ಸಿ ಮಾಡಿಸಬೇಕು.
ಇ-ಕೆವಾಯ್‍ಸಿ ಮಾಡಿಸಲು ರೈತರು ಕೇಂದ್ರ ಸರ್ಕಾರದ ಜಾಲ ತಾಣವಾದ https://pmkisan.gov.in/ಪೋರ್ಟಲ್‍ನ ಪಾರಮರ್ ಕಾರ್ನರ್‍ನ ಇ-ಕೆವಾಯ್‍ಸಿ ಅವಕಾಶದಡಿ ರೈತನ (ಫಲಾನುಭವಿ) ಆಧಾರ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ ಸಂಖ್ಯೆ ಯೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ಆಧಾರ ಕಾರ್ಡನೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆಗೆ ಓಟಿಪಿ ರವಾನೆಯಾಗುತ್ತದೆ. ನಂತರ ಸ್ವೀಕರಿಸಿದ ಒಟಿಪಿಯನ್ನು ದಾಖಲಿಸಿ ಸಬ್‍ಮಿಟ್ ಪಾರ್ ಯುತ್ ಎಂಬ ಬಟನ್ ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು ಇ-ಕೆವಾಯ್‍ಸಿ ಸೆಕ್ಸಸ್ ಸಬ್‍ಮಿಟೆಡ್ ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಓಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವಾಯ್‍ಸಿ ಮಾಡಬಹುದಾಗಿದೆ.
ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾವ ಮೊಬೈಲ್ ಸಂಖ್ಯೆಗೆ ಇ-ಕೆವಾಯ್‍ಸಿಗಾಗಿ ಕಳುಹಿಸಿದ ಓಟಿಪಿಯು ಸ್ವೀಕೃತವಾಗಿರುವುದಿಲ್ಲವೋ ಅಂತಹ ಫಲಾನುಭವಿಗಳು ಸಮೀಪದ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಬಯೋಮೆಟ್ರಿಕ್ ಯಂತ್ರದ ಮೂಖಾಂತರ ಇ-ಕೆವಾಯ್‍ಸಿ ಮಾಡಿಸಬಹುದಾಗಿದೆ. ಇಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆ ಇ-ಕೆವಾಯ್‍ಸಿ ಮಾಡಲಾಗುತ್ತದೆ. 2 ನೇ ಪ್ರಕ್ರಿಯೆ (ವಿಧಾನ) ಗಾಗಿ ಮಾತ್ರ ನಾಗರಿಕ ಸೇವಾ ಕೇಂದ್ರದವರಿಗೆ 15 ರೂ.ಗಳನ್ನು ಫಲಾನುಭವಿಯು ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದು.
ಗುಜರಾತ್ : 108 ಅಡಿ ಎತ್ತರದ ʻಹನುಮಾನ್ ಪ್ರತಿಮೆʼಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ – Vishwanews24
