PSI’ ನೇಮಕಾತಿ ಪ್ರಕರಣ : ವಿಚಾರಣೆ ಎದುರಿಸಿದ್ದ ಗಣಪತಿ ಭಟ್ ನೇಣು ಬಿಗಿದು ಆತ್ಮಹತ್ಯೆ – VIshwanews24

Featured, ರಾಜ್ಯ ನ್ಯೂಸ್

PSI’ ನೇಮಕಾತಿ ಪ್ರಕರಣ : ವಿಚಾರಣೆ ಎದುರಿಸಿದ್ದ ಗಣಪತಿ ಭಟ್ ನೇಣು ಬಿಗಿದು ಆತ್ಮಹತ್ಯೆ

ಕಾರವಾರ : 545 ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದ ಸಿದ್ದಾಪುರ ತಾಲೂಕಿನ ನೆಲೆಮಾವು ಗ್ರಾಮದ ಗಣಪತಿ ಭಟ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಣಪತಿ ಭಟ್ ಕಳೆದ ಜುಲೈ 13 ರಂದು ಸಿಐಡಿ ವಿಚಾರಣೆ ಎದುರಿಸಿದ್ದರು.

ಶುಕ್ರವಾರ(ಮಾರ್ಚ್ 24) ಹೆರೂರು ಗ್ರಾಮದ ತಟ್ಟೀಕೈ ಎಂ.ಆರ್‌.ಭಟ್ಟ ಅವರ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು : ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ – ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಟಿಕೆಟ್ – Vishwanews24

ಸಿದ್ದಾಪುರ ತಾಲೂಕಿನ ನೆಲಮಾವಿನ ಗಣಪತಿ ಭಟ್ ನೆಲಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಹಲವು ರಾಜಕಾರಣಿಗಳ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಇವರು ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ವಿಷಯಗಳಲ್ಲಿ ಬ್ರೋಕರಿಂಗ್ ಕೆಲಸ ಮಾಡುತ್ತಿದ್ದರು.

ಗಣಪತಿ ಭಟ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಕಾರಣ ತಿಳಿದುಬಂದಿಲ್ಲ. ಶವವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಿದ್ದಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ – ಕರಾವಳಿಯ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳು – VIshwnaews24

Leave a Reply