PSI ನೇಮಕಾತಿ ಅಕ್ರಮ :ದಿವ್ಯಾ ಹಾಗರಗಿ ಸೇರಿದಂತೆ 26 ಆರೋಪಿಗಳಿಗೆ ಜಾಮೀನು – VIshwanews24
PSI ನೇಮಕಾತಿ ಅಕ್ರಮ :ದಿವ್ಯಾ ಹಾಗರಗಿ ಸೇರಿದಂತೆ 26 ಆರೋಪಿಗಳಿಗೆ ಜಾಮೀನು
ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ದಿಬ್ಯಾ ಹಾಗರಗಿ ಸಹಿತ 26 ಮಂದಿಗೆ ಜಿಲ್ಲಾ ನ್ಯಾಯಲಯದ ನ್ಯಾಯಾಧೀಶರು ಗುರುವಾರ ಜಾಮೀನು ಮಂಜೂರುಗೊಳಿಸಿ ಆದೇಶಿಸಿದ್ದಾರೆ.
ಕಿಂಗ್ ಪಿನ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಡಿ ವೈ ಎಸ್ ಪಿ ಮಲ್ಲಿಕಾರ್ಜುನ ಸಾಲಿ ಸೇರಿದಂತೆ 26 ಮಂದಿ ಜಾಮೀನು ಪಡೆದುಕೊಂಡಿದ್ದಾರೆ. ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ. ಬಿ. ಪಾಟೀಲ್ ಜಾಮೀನು ಮಂಜೂರುಗೊಳಿಸಿದ್ದಾರೆ.
ಇದೀಗ 26 ಮಂದಿಗೆ ಜಾಮೀನು ಲಭಿಸುವ ಮೂಲಕ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಜೈಲು ಪಾಲಾಗಿದ್ದ ಒಟ್ಟು 36 ಮಂದಿಗೆ ಜಾಮೀನು ಸಿಕ್ಕಂತಾಗಿದೆ.
ಗೋ-ಕಾರ್ಟ್‌ನಲ್ಲಿ ಕೂದಲು ಸಿಕ್ಕಿ ಭಾರತೀಯ ಮೂಲದ 15ರ ಹರೆಯದ ಹುಡುಗಿ ಗಂಭೀರ ಗಾಯ – Vishwanews24
