PSI ಅಕ್ರಮ ನೇಮಕಾತಿ : ಪೊಲೀಸರೇ ಭಾಗಿಯಾಗಿದ್ದರೆ ಅವರ ಯೂನಿ ಫಾರ್ಮ್ ಬಿಚ್ಚಿ ಜೈಲಿಗೆ ಹಾಕ್ತೀವಿ : ಗೃಹ ಸಚಿವ – VIshwanews24

Featured, ರಾಜ್ಯ ನ್ಯೂಸ್

PSI ಅಕ್ರಮ ನೇಮಕಾತಿ : ಪೊಲೀಸರೇ ಭಾಗಿಯಾಗಿದ್ದರೆ ಅವರ ಯೂನಿ ಫಾರ್ಮ್ ಬಿಚ್ಚಿ ಜೈಲಿಗೆ ಹಾಕ್ತೀವಿ : ಗೃಹ ಸಚಿವ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ತಪ್ಪೋದಿಲ್ಲ. ಪೊಲೀಸರೇ ಭಾಗಿಯಾಗಿದ್ದರೆ ಅವರ ಯೂನಿ ಫಾರ್ಮ್ ಬಿಚ್ಚಿ ಜೈಲಿಗೆ ಹಾಕ್ತೀವಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಸಿದ್ಧರಾಮಯ್ಯ ಆರೋಪ ಮಾಡ್ತಾ ಇದ್ದಾರೆ. ಆದ್ರೇ. ಅವರ ಕಾಲದಲ್ಲೂ ಪಿಯು ಅಕ್ರಮ ಹಗರಣ ನಡೆದಿತ್ತು. ಆಗ 6 ವಿದ್ಯಾರ್ಥಿಗಳು ಆತ್ಮಹತ್ಯೆಗೂ ಶರಣಾಗಿದ್ದರು. ಅದನ್ನು ಅವರು ಮರೆತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ವಿರೋಧ ಪಕ್ಷಗಳ ಆರೋಪಗಳಲ್ಲಿ ನಿಜವಿಲ್ಲ. ಪಿಎಸ್‌ಐ ಅಕ್ರಮ ಬೆಳಕಿಗೆ ಬಂದ ಕೂಡಲೇ ಒಳ್ಳೆಯ ಸಿಐಡಿ ಟೀಂ ರಚನೆ ಮಾಡಿ, ತನಿಖೆಗೆ ನೀಡಿದ್ದೇವೆ. ಈಗ ತನಿಖೆ ಕೂಡ ನಡೆಯುತ್ತಿದೆ. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ  : ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ – Vishwanews24

Leave a Reply