RSS ಇಡೀ ವಿಶ್ವವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.: ಸತೀಶ್ ಪೂನಿಯಾ -Vishwanews24

Featured, ದೇಶ

ಜೈಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಒಂದು ಶಕ್ತಿಶಾಲಿ ಚಳವಳಿ. ನನ್ನ ಪ್ರಕಾರ ಆರೆಸ್ಸೆಸ್‌ ಇಲ್ಲದಿದ್ದರೆ ಹಿಂದೂಸ್ಥಾನವೇ ಇರುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಸತೀಶ್‌ ಪೂನಿಯಾ ಹೇಳಿದ್ದಾರೆ.

ಆರೆಸ್ಸೆಸ್‌ ಹಿನ್ನೆಲೆಯ ಪೂನಿಯಾ ಅವರನ್ನು ಶನಿವಾರ ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ಅವರು ‘ ಆರೆಸ್ಸೆಸ್‌ ಎಂಬುದು ಒಂದು ಪದವಲ್ಲ, ಅದೊಂದು ಚಳವಳಿ. ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬದಲಿಸುವ ಸಾಮರ್ಥ್ಯವನ್ನು ಆರೆಸ್ಸೆಸ್ ಹೊಂದಿದೆ. ಆರೆಸ್ಸೆಸ್‌ನಿಂದಾಗಿಯೇ ಇಂದು ‘ಕೇಸರಿ’ಗೆ ಗೌರವ ಸಿಗುತ್ತಿದೆ,’ ಎಂದಿದ್ದಾರೆ.

ಐತಿಹಾಸಿಕ ಸತ್ಯಗಳನ್ನು ಮುಚ್ಚಿಡಲು ಎಂದಿಗೂ ಸಾಧ್ಯವಿಲ್ಲ. ದೇಶ ವಿಭಜನೆಗೆ ಕಾರಣವಾದವರು ಯಾರು? ಮೊಘಲರು ಮತ್ತು ಬ್ರಿಟಿಷರ ಜತೆ ಯಾರು ಹೊಂದಾಣಿಕೆಯನ್ನು ಹೊಂದಿದ್ದರು ಎಂದು ಕಾಂಗ್ರೆಸ್ ಪಕ್ಷವನ್ನು ಹೆಸರಿಸದೇ ಟೀಕಿಸಿದರು.