SDPI ಕಾಪು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾದಿಕ್ ಕೆ. ಪಿ. ಮಲ್ಲಾರ್ , ಕಾರ್ಯದರ್ಶಿಯಾಗಿ ನೂರ್ ನವಾಝ್ ಉಚ್ಚಿಲ ಆಯ್ಕೆ – vishwanews24

ಉಡುಪಿ

ಎಸ್‌’ಡಿಪಿಐ ಕಾಪು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾದಿಕ್ ಕೆ ಪಿ ಮಲ್ಲಾರ್ , ಕಾರ್ಯದರ್ಶಿಯಾಗಿ ನೂರ್ ನವಾಝ್ ಉಚ್ಚಿಲ ಆಯ್ಕೆ

ಕಾಪು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ (ಕಾಪು ) ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಸಭೆಯು ಕ್ಷೇತ್ರದ ನಿರ್ಗಮನ ಅಧ್ಯಕ್ಷರಾದ ಹನೀಫ್ ಮೂಳೂರು ರವರ ಅಧ್ಯಕ್ಷತೆಯಲ್ಲಿ ಉಚ್ಚಿಲದ ತವಕ್ಕಲ್ ಸಭಾಭವನದಲ್ಲಿ ನಡೆಯಿತು.

ಪ್ರತೀ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಆಂತರಿಕ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಎಸ್‌ಡಿಪಿಐ ಕಾಪು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾದಿಕ್ ಕೆ ಪಿ ಮಲ್ಲಾರ್ , ಉಪಾಧ್ಯಕ್ಷರಾಗಿ ಹನೀಫ್ ಮೂಳೂರು , ಕಾರ್ಯದರ್ಶಿಯಾಗಿ ನೂರ್ ನವಾಝ್ ಉಚ್ಚಿಲ , ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮಲ್ಲಾರ್ ಮತ್ತು ಕೋಶಾಧಿಕಾರಿಯಾಗಿ ಫಾರೂಕ್ ಉದ್ಯಾವರ ರವರು ಆಯ್ಕೆಯಾದರು.

ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣ; ಅರುಣ್ ಕುಮಾರ್ ಪುತ್ತಿಲಗೆ ಜಾಮೀನು ಮಂಜೂರು – vishwanews24

ಸಮಿತಿ ಸದಸ್ಯರಾಗಿ ಹಮೀದ್ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ್, ಮಹಮ್ಮದ್ ಕಟಪಾಡಿ ಹಾಗೂ ತೌಫೀಕ್ ಬಗ್ಗತೋಟ ಆಯ್ಕೆಯಾದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಕಾಪು ಕ್ಷೇತ್ರದ ನಿರ್ಗಮನ ಅಧ್ಯಕ್ಷರಾದ ಹನೀಫ್ ಮೂಳೂರು ಧ್ವಜಾರೋಹಣದ ಮೂಲಕ ಸಭೆಗೆ ಚಾಲನೆ ನೀಡಿದರು. ನಂತರ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ರವರು ನಾಯಕತ್ವದ ಕುರಿತು ತರಬೇತಿ ನೀಡಿದರು .

ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವ ಮತ್ತು ಶಫೀಕ್ ಉಡುಪಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ, ಜಿಲ್ಲಾ ಕಾರ್ಯದರ್ಶಿ ಮಜೀದ್ ಪೊಲ್ಯ, ಜಿಲ್ಲಾ ಸಮಿತಿ ಸದಸ್ಯರಾದ ರಝಕ್ ವೈ ಎಸ್ ಉಚ್ಚಿಲ, ಹಾಗೂ ಇಬ್ರಾಹಿಂ ಹರ್ಷ್, ಉಡುಪಿ ವಿಮ್ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ, ವಿಮ್ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷೆ ಫರ್ಝಾನ ಹಮೀದ್, ಸೇರಿದಂತೆ ಕ್ಷೇತ್ರ,
ಗ್ರಾಮ ಸಮಿತಿ, ಹಾಗೂ ಪುರಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತ ; ಯುವಕ ಸಾವು – vishwanews24

Leave a Reply