SDPI ಕಚೇರಿ ಮೇಲೆ NIA ದಾಳಿ – ಇದು ರಾಜಕೀಯ ಪ್ರೇರಿತ : ಪ್ರವೀಣ್‌ ನೆಟ್ಟಾರು ಕೇಸ್‌ ಗೂ ನಮಗೂ ಯಾವ ಸಂಬಂಧವಿಲ್ಲ : ಅಬೂಬಕರ್‌ ಕುಳಾಯಿ – Vishwanews24

Featured, ದಕ್ಷಿಣ ಕನ್ನಡ

SDPI ಕಚೇರಿ ಮೇಲೆ NIA ದಾಳಿ – ಇದು ರಾಜಕೀಯ ಪ್ರೇರಿತ ..

ಪ್ರವೀಣ್‌ ನೆಟ್ಟಾರು ಕೇಸ್‌ ಗೂ ನಮಗೂ ಯಾವ ಸಂಬಂಧವಿಲ್ಲ ..

ಕಚೇರಿಯಲ್ಲಿ ನಾವು ಯಾವುದೇ ಬಾಂಬ್‌ ಗಳನ್ನು ಇಟ್ಟುಕೊಂಡಿಲ್ಲ ..

SDPI ಜಿಲ್ಲಾಧ್ಯಕ್ಷ ಅಬೂಬಕರ್‌ ಕುಳಾಯಿ ಸ್ಪಷ್ಟನೆ

ಮಂಗಳೂರು: ಜಿಲ್ಲೆಯಲ್ಲಿ ಎಸ್‌ ಡಿಪಿಐ ಕಚೇರಿ ಮೇಲೆ ಎನ್‌ ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ SDPI ಜಿಲ್ಲಾಧ್ಯಕ್ಷ ಅಬೂಬಕರ್‌ ಕುಳಾಯಿ ಸ್ಪಷ್ಟನೆ ನೀಡಿದ್ದಾರೆ. ಸರ್ಚ್‌ ವಾರೆಂಟ್‌ ಪಡೆದು ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಆಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲ ಫೋಟೋ, ಲ್ಯಾಪ್‌ ಟಾಪ್‌ , ಪೆನ್‌ ಡ್ರೈವ್‌ ಜಪ್ತಿ ಮಾಡಿದ್ದಾರೆ. ಪ್ರವೀಣ್‌ ನೆಟ್ಟಾರು ಕೇಸ್‌ ಗೂ ನಮಗೂ ಯಾವ ಸಂಬಂಧವಿಲ್ಲ. ಕಚೇರಿಯಲ್ಲಿ ನಾವು ಯಾವುದೇ ಬಾಂಬ್‌ ಗಳನ್ನು ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: ದುಡುಕದೆ ನಿರ್ಣಯವನ್ನು ತೆಗೆದುಕೊಳ್ಳಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಇನ್ನು ಬೆಂಗಳೂರು, ಮಂಗಳೂರು, ಶಿರಸಿಯಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್​ಐ, ಎಸ್​ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್​ಐ ಕಚೇರಿಗಳಾಗಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವೆಡೆಯೂ ದಾಳಿ ನಡೆದಿದೆ.

ಇದನ್ನೂ ಓದಿ: ಶಿರ್ವ: ರಸ್ತೆ ದಾಟಲು ನಿಂತಿದ್ದ ತಂದೆ ಮಗನಿಗೆ ಬೈಕ್‌ ಢಿಕ್ಕಿ ; ತಂದೆ ಸಾವು , ಮಗ ಗಂಭೀರ – Vishwanews24

Leave a Reply