SSLC ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾದ ವಿದ್ಯಾರ್ಥಿ ; ಮಗನ ಫೋಟೋ ಹಿಡಿದು ಪೋಷಕರ ಹುಡುಕಾಟ – Vishwanews24
SSLC ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾದ ವಿದ್ಯಾರ್ಥಿ ; ಮಗನ ಫೋಟೋ ಹಿಡಿದು ಪೋಷಕರ ಹುಡುಕಾಟ
ನೆಲಮಂಗಲ, : ಇಂದು ಎಸ್ಎಸ್ಎಲ್ಸಿ ಪರೀಕ್ಷೆ (SSLC Result) ಫಲಿತಾಂಶ ಪ್ರಕಟವಾಗಲಿದ್ದು ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಬೆಂ.ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾ. ಬೆಟ್ಟಹಳ್ಳಿಯಲ್ಲಿ ನಡೆದಿದೆ. ಮಂಡಿಗೆರೆ ಸರ್ಕಾರಿ ಶಾಲೆ ವಿದ್ಯಾರ್ಥಿ ಚಂದನ್ ಗೌಡ(16) ರಿಸಲ್ಟ್ಗೆ ಭಯಬಿದ್ದು ನಾಪತ್ತೆಯಾಗಿದ್ದಾನೆ.
ಸುರೇಶ್ ಮತ್ತು ರೂಪ ದಂಪತಿಗಳ ಪುತ್ರ ಚಂದನ್ ಗೌಡ ಬೈರನಾಯಕನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಮಗನ ಫೋಟೋ ಹಿಡಿದು ಪೋಷಕರು ಹುಡುಕಾಡುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SSLC ಫಲಿತಾಂಶ : ಬೆಳ್ತಂಗಡಿಯ ಚಿನ್ಮಯ್ ರಾಜ್ಯಕ್ಕೆ ದ್ವಿತೀಯ , ಕಾರ್ಕಳದ ಸಹನಾ ರಾಜ್ಯಕ್ಕೆ ತೃತೀಯ – Vishwanews24
