UAEಯಲ್ಲಿ ಸಿಲುಕಿದ ಭಾರತೀಯರಿಗೆ SpiceJet ನಿಂದ 4 ವಿಶೇಷ ವಿಮಾನಗಳ ಹಾರಾಟ – vishwanews24
UAEಯಲ್ಲಿ ಸಿಲುಕಿದ ಭಾರತೀಯರಿಗೆ SpiceJet ನಿಂದ 4 ವಿಶೇಷ ವಿಮಾನಗಳ ಹಾರಾಟ
ಹೊಸದಿಲ್ಲಿ: ವಾಯುಪ್ರದೇಶ ಹಠಾತ್ ಮುಚ್ಚಿದ ಬಳಿಕ ಯುಎಇಯಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಮಂಗಳವಾರ 4 ವಿಶೇಷ ವಿಮಾನಗಳನ್ನು ಹಾರಾಟ ನಡೆಸುವುದಾಗಿ SpiceJet ತಿಳಿಸಿದೆ.
ಬುಧವಾರ ಅಂದರೆ ಮಾರ್ಚ್ 4ರಿಂದ ಫುಜೈರಾ- ದಿಲ್ಲಿ ಮತ್ತು ಫುಜೈರಾ–ಮುಂಬೈ ನಡುವಿನ ನಿಗದಿತ ವಿಮಾನ ಸೇವೆಗಳನ್ನು ಮರುಪ್ರಾರಂಭಿಸುವುದಾಗಿ SpiceJet ಪ್ರಕಟಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಫುಜೈರಾದಿಂದ ವಿಶೇಷ ವಿಮಾನ ಸೇವೆ ದಿಲ್ಲಿ, ಮುಂಬೈ ಮತ್ತು ಕೊಚ್ಚಿಗೆ ಇರಲಿದೆ. ನಾಲ್ಕು ವಿಮಾನಗಳಲ್ಲಿ ಎರಡು ವಿಮಾನ ಮುಂಬೈಗೆ ಬರಲಿದೆ. ಪ್ರಯಾಣಿಕರ ಅವಶ್ಯಕತೆಗಳು ಮತ್ತು ನಿಯಂತ್ರಣ ಸಂಸ್ಥೆಗಳ ಅನುಮೋದನೆ ಬಳಿಕ ಇನ್ನಷ್ಟು ವಿಶೇಷ ವಿಮಾನಗಳ ಹಾರಾಟದ ಬಗ್ಗೆ ವಿಮಾನಯಾನ ಸಂಸ್ಥೆ ಪರಿಶೀಲಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ 👇:
